Advertisement

12 ಸಾವಿರ ಹೆಚ್ಚುವರಿ ತೆರಿಗೆ

06:10 AM Dec 20, 2018 | |

ಹೊಸದಿಲ್ಲಿ :  ದೇಶದಲ್ಲಿ ಎಲೆಕ್ಟ್ರಿಕ್‌ ವಾಹನ ಖರೀದಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನೀತಿಯ ಕರಡು ರೂಪಿಸಿದ್ದು, ಪೆಟ್ರೋಲ್‌ ಹಾಗೂ ಡೀಸೆಲ್‌ ವಾಹನಗಳ ಖರೀದಿಯ ಮೇಲೆ 12 ಸಾವಿರ ರೂ. ತೆರಿಗೆ ವಿಧಿಸಿ, ಅದರಿಂದ ಬಂದ ಆದಾಯದಿಂದ ಎಲೆಕ್ಟ್ರಿಕ್‌ ವಾಹನಗಳ ಖರೀದಿಗೆ ಸಬ್ಸಿಡಿ ನೀಡುವ ಪ್ರಸ್ತಾಪ ಮಾಡಲಾಗಿದೆ. ನೀತಿ ಆಯೋಗ ಈ ಸಂಬಂಧ ನೀತಿಯನ್ನು ತಯಾರಿಸಿದ್ದು, ಎಲೆಕ್ಟ್ರಿಕ್‌ ವಾಹನಗಳಿಗೆ 25 ಸಾವಿರದಿಂದ 50 ಸಾವಿರದ ವರೆಗೂ ರಿಯಾಯಿತಿ ನೀಡಬಹುದಾಗಿದೆ.
ಖಾಸಗಿ ವ್ಯಕ್ತಿಗಳಿಗೆ ನೇರ ಸಬ್ಸಿಡಿ ನೀಡಿದರೆ, ಎಲೆಕ್ಟ್ರಿಕ್‌ ಬಸ್‌ ಖರೀದಿಸುವ ರಾಜ್ಯಗಳಿಗೆ ಕಿ.ಮೀ ಆಧಾರದಲ್ಲಿ ಪ್ರೋತ್ಸಾಹಧನ ನೀಡಲಾಗುತ್ತದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next