ದೊಡ್ಡಬಳ್ಳಾಪುರ: ತಾಲೂಕಿನ 120 ಗ್ರಾಮಗಳಲ್ಲಿ ಕುಡಿಯುವನೀರಿನ ಸಮಸ್ಯೆ ತಲೆದೊರಿದೆ. ಈ ಗ್ರಾಮಗಳಿಗೆ ಟ್ಯಾಂಕರ್‌ಮೂಲಕ ನೀರು ಪೂರೈಕೆ, 87 ಲಕ್ಷ ರೂ.ನಲ್ಲಿ 27 ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಲಾಗುತ್ತಿದೆ ಎಂದು ತಾಪಂ ಇಒಮುರುಡಯ್ಯ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಅಧ್ಯಕ್ಷ ನಾರಾಯಣಗೌಡಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರುಮಾತನಾಡಿದರು.
ಆಡಳಿತ ವೈಫಲ್ಯ: ಸಭೆಯಲ್ಲಿ ಸದಸ್ಯ ಡಿ.ಸಿ.ಶಶಿಧರ್‌ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗದೇ,ಜನಪ್ರತಿನಿಧಿಗಳು ಗ್ರಾಮಗಳಲ್ಲಿ ಜನರ ಆಕೊ›àಶಕ್ಕೆಒಳಗಾಗುವಂತಾಗಿದೆ.
ಸಮಸ್ಯೆ ಬಗೆ ಹರಿಸಲು ಅಧಿಕಾರಿಗಳುಮುಂದಾಗಬೇಕಿದೆ. 120 ಗ್ರಾಮಗಳಲ್ಲಿ ನೀರಿನ ಸಮಸ್ಯೆಇದ್ದರೂ ಬಗೆಹರಿಸದೇ ಸಭೆಗಳನ್ನು ನಡೆಸುವುದರÇÉೇಅಧಿಕಾರಿಗಳು ಕಾಲಹರಣ ಮಾಡುತ್ತಿರುವುದು ಆಡಳಿತದವೈಫಲ್ಯಕ್ಕೆ ಸಾಕ್ಷಿ ಎಂದು ಬೇಸರ ವ್ಯಕ್ತಪಡಿಸಿದರು.
ಸದಸ್ಯ ಎಚ್.ವಿ.ಶ್ರೀವತ್ಸ ಮಾತನಾಡಿ, ಕ್ರಿಯಾ ಯೋಜನೆಇಲ್ಲದೆ ಕೊಳವೆಬಾವಿ ಕೊರೆಸುವುದಿಲ್ಲ ಎಂದು ಕಾಯುತ್ತಕುಳಿತರೆ ಸಮಸ್ಯೆ ಬಗೆಹರಿಸಲು ಕಷ್ಟವಾಗಲಿದೆ. ಕ್ರಿಯಾಯೋಜನೆ ವಿಳಂಬದಿಂದ ನೀರಿನ ಸಮಸ್ಯೆ ತೀವ್ರವಾಗುತ್ತಿದೆ.ಗ್ರಾಪಂ ವ್ಯಾಪ್ತಿಯಲ್ಲಿ 15ನೇ ಹಣಕಾಸು ಯೋಜನೆಯಡಿಕೊಳವೆಬಾವಿ ಕೊರೆಸುವಂತೆ ಜಿಪಂ ಸಿಇಒ ಸೂಚಿಸಿದ್ದಾರೆ.ಆದರೆ, ತಾಪಂ ಅನುಮತಿ ನೀಡದೆ ಗೊಂದಲವಾಗಿದೆ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಪಠ್ಯ ಬೋಧನೆ ಪೂರ್ಣ: ಬಿಇಒ ಬೈಯಪ್ಪರೆಡ್ಡಿಮಾಹಿತಿ ನೀಡಿ, ಕೋವಿಡ್-19 ಹಿನ್ನೆಲೆಯಲ್ಲಿ 6ನೇ ತರಗತಿಮೇಲ್ಪಟ್ಟ ಶಾಲೆಗಳಲ್ಲಿ ಮಾತ್ರ ಪಾಠಗಳು ನಡೆಯುತ್ತಿವೆ. ಎಸ್ಸೆಸ್ಸೆಲ್ಸಿಪರೀಕ್ಷೆ ದಿನಾಂಕ ಘೋಷಣೆ ಮಾಡಿದ್ದು, ಪಠ್ಯ ಕ್ರಮ ಬೋಧನೆಪೂರ್ಣಗೊಳಿಸಲಾಗಿದೆ. ತಾಲೂಕಿನ 100 ಶಾಲೆಗಳಲ್ಲಿ ಖಾಸಗಿಕಾರ್ಖಾನೆಯ ನೆರವಿನೊಂದಿಗೆ, ಮಿಯಾವಾಕಿ ಮಾದರಿಅರಣ್ಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿಮಂಡಿಸಿದರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷೆಬಿ.ಎಂ.ಯಶೋದಮ್ಮ ಶಿವಕುಮಾರ್, ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷೆ ಚೆನ್ನಮ್ಮ ರಾಮಲಿಂಗಯ್ಯ, ಸದಸ್ಯರುಇದ್ದರು.