Advertisement
ಅಧಿಕಾರಿಗಳು ನಿಯಮಾನುಸಾರ ಆಯಾ ಕಂದಾಯ ವೃತ್ತ ಇಲ್ಲವೇ ಕೇಂದ್ರ ಸ್ಥಾನಗಳಲ್ಲಿ ಕಡ್ಡಾಯವಾಗಿ ವಾಸ್ತವ್ಯವಿದ್ದು ಕರ್ತವ್ಯ ನಿರ್ವಹಿಸಬೇಕು. ಈ ಬಗ್ಗೆ ಸರಕಾರ ಹಲವು ಬಾರಿ ನಿರ್ದೇಶನ ನೀಡುತ್ತಲೇ ಇದ್ದರೂ ಸರಕಾರದ ಆದೇಶ ಧಿಕ್ಕರಿಸಿ ಕೇಂದ್ರ ಸ್ಥಾನದಿಂದ ಹೊರಗೆ ವಾಸ್ತವ್ಯವಿದ್ದಾರೆ. ಹೀಗಾಗಿ ಇದನ್ನು ಈ ಬಾರಿ ಗಂಭೀರವಾಗಿ ಪರಿಗಣಿಸಿರುವ ಸರಕಾರ, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರಗಿಸ ಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಂಬಂಧಪಟ್ಟ ತಹಶೀಲ್ದಾರ್ ಈ ಕುರಿತು ಪರಿಶೀಲನೆ ನಡೆಸಬೇಕು. ದೂರುಗಳು ಹಾಗೂ ಲೋಪದೋಷಗಳು ಕಂಡುಬಂದರೆ ಆಯಾ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕು ಎಂದು ಕಂದಾಯ ಇಲಾಖೆ ನಿರ್ದೇಶನ ನೀಡಿದೆ.
Related Articles
ಕೆಲವು ಅಧಿಕಾರಿಗಳು ಕೇಂದ್ರ ಸ್ಥಾನಕ್ಕೆ ಬಾರದೆ ಎಲ್ಲಿಯೋ ಇದ್ದು ಕೇವಲ ದೂರವಾಣಿ, ಮೊಬೈಲ್ ಕರೆಗಳಲ್ಲಿಯೇ ಕೆಲಸ ನಿರ್ವಹಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇನ್ನು ಕೆಲವರು ಕೇವಲ ಸಭೆ, ಕಾರ್ಯಕ್ರಮಗಳಿದ್ದರಷ್ಟೇ ಕೇಂದ್ರ ಕಚೇರಿಗೆ ಬರುತ್ತಾರೆ. ಇಲ್ಲವೇ ಕಚೇರಿಗೆ ತಮಗೆ ತಿಳಿದ ಸಮಯಕ್ಕೆ ಕೆಲ ಹೊತ್ತು ಭೇಟಿ ನೀಡಿ ಹೋಗುತ್ತಾರೆ. ಇದಕ್ಕೆಲ್ಲ ಕಡಿವಾಣ ಹಾಕಿ ಅಧಿಕಾರಿಗಳು ಸಾರ್ವಜನಿಕರಿಗೆ ಸಿಗುವಂತೆ ಮಾಡಲು ಸರಕಾರ, ಅಧಿಕಾರಿಗಳ ಕೇಂದ್ರ ಸ್ಥಾನ ವಾಸ್ತವ್ಯ ಕಡ್ಡಾಯ ನಿಯಮ ಪಾಲನೆಗೆ ಆದೇಶ ಹೊರಡಿಸಿದೆ.
Advertisement
ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ವಾಸವಿದ್ದು ಸಾರ್ವಜನಿಕ ಸೇವೆಗೆ ಲಭ್ಯವಾಗಬೇಕು. ತಪ್ಪಿದ್ದಲ್ಲಿ ಅಂಥವರ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ಜರಗಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.-ರಾಜೇಂದರ್ ಕುಮಾರ್ ಕಟಾರಿಯಾ,
ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ -ಎಚ್.ಕೆ. ನಟರಾಜ