Advertisement

ಐಕ್ಯೂ ಮಟ್ಟದಲ್ಲಿ ಐನ್‌ಸ್ಟೀನ್‌ ಹಿಂದಿಕ್ಕಿದ ಭಾರತೀಯ ಬಾಲೆ

01:23 PM May 07, 2017 | |

ಲಂಡನ್‌: ಐಕ್ಯೂ ಪರೀಕ್ಷೆಯಲ್ಲಿ ಭಾರತೀಯರ ಜಯದ ಸರಣಿ ಮುಂದುವರಿದಿದೆ. ಈ ಬಾರಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಬ್ರಿಟಿಷ್‌ ಮೆನ್ಸಾ ಐಕ್ಯೂ ಟೆಸ್ಟ್‌ನಲ್ಲಿ ಭಾರತೀಯ ಮೂಲದ 12ರ ಬಾಲಕಿ ರಾಜಗೌರಿ ಪವಾರ್‌ 162 ಅಂಕಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. 

Advertisement

ಈಕೆ ತನ್ನ ಐಕ್ಯೂ ಅಂದರೆ ಬುದ್ಧಿಮತ್ತೆಯ ಮಟ್ಟದಲ್ಲಿ ಜೀನಿಯಸ್‌ಗಳೆಂದೇ ಪರಿಗಣಿಸಲ್ಪಟ್ಟ ಆಲ್ಬರ್ಟ್‌ ಐನ್‌ಸ್ಟೀನ್‌ ಮತ್ತು ಸ್ಟೀಫ‌ನ್‌ ಹಾಕಿಂಗ್‌ರನ್ನೂ ಮೀರಿಸಿದ್ದಾಳೆ.

18ರೊಳಗಿನವರ ಐಕ್ಯೂ ಮಟ್ಟದಲ್ಲೇ ಅತ್ಯಧಿಕ ಅಂದರೆ 162 ಅನ್ನು ರಾಜಗೌರಿ ಪಡೆದುಕೊಂಡಿದ್ದಾಳೆ. ಈ ಸಾಧನೆಯ ಮೂಲಕ ಆಕೆ ಪ್ರತಿಷ್ಠಿತ ಬ್ರಿಟಿಷ್‌ ಮೆನ್ಸಾ ಐಕ್ಯೂ ಸೊಸೈಟಿಗೆ ಸೇರ್ಪಡೆಗೊಂಡಿದ್ದಾಳೆ. ಐಕ್ಯೂ (ಇಂಟೆಲಿಜೆನ್ಸ್‌ ಕೋಷೆಂಟ್‌) ಎನ್ನುವುದು ಒಬ್ಬ ವ್ಯಕ್ತಿಯ ಬುದ್ಧಿಮತ್ತೆಯ ಮಟ್ಟವನ್ನು ಪರೀಕ್ಷಿಸುವ ವಿಧಾನವಾಗಿದೆ. ಕಳೆದ ತಿಂಗಳು ನಡೆದ ಈ ಪರೀಕ್ಷೆಯಲ್ಲಿ ರಾಜಗೌರಿ ಕೂಡ ಪಾಲ್ಗೊಂಡಿದ್ದಳು. ಜೀನಿಯಸ್‌ ಎಂಬ ಖ್ಯಾತಿ ಪಡೆಯಲು ಅಭ್ಯರ್ಥಿಯು 140 ಅಂಕಗಳನ್ನು ಪಡೆಯಬೇಕು. ಆದರೆ, ರಾಜಗೌರಿ 162 ಪಡೆದಿದ್ದು, ಜಗತ್ತಿನಾದ್ಯಂತ ಈ ಸ್ಕೋರ್‌ ಪಡೆದ ಕೇವಲ 20 ಸಾವಿರ ಮಂದಿಯಲ್ಲಿ ಒಬ್ಬಳು ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಕಳೆದ ವರ್ಷವೂ ಭಾರತೀಯ ಪುಟಾಣಿ 11 ವರ್ಷದ ಧ್ರುವ ತಲತಿ ಈ ಸಾಧನೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next