Advertisement

ಆನ್‌ಲೈನ್ ಗೇಮಿಂಗ್ ಟೋಕನ್‌ ವಿವಾದ : 12 ವರ್ಷದ ಸೋದರ ಸಂಬಂಧಿಯಯನ್ನೇ ಕೊಂದ 16 ರ ಬಾಲಕ

05:50 PM Dec 14, 2021 | Team Udayavani |

ರಾಜಸ್ಥಾನ: ಆನ್‌ಲೈನ್ ಗೇಮ್‌ಗಳ ರಿಚಾರ್ಜ್ ಟೋಕನ್ ಪಾವತಿ ವಿಚಾರದಲ್ಲಿ ನಡೆದ ಜಗಳದಲ್ಲಿ 16 ವರ್ಷದ ಬಾಲಕನೋರ್ವ ತನ್ನ 12 ವರ್ಷದ ಸೋದರ ಸಂಬಂಧಿಯನ್ನೇ ಕತ್ತು ಹಿಸುಕಿ ಕೊಂದು ಹೊಲದಲ್ಲಿ ಹೂತು ಹಾಕಿರುವ ಘಟನೆ ನಗೌರ್ ಜಿಲ್ಲೆಯ ಲಾಡ್ನುವಿನಲ್ಲಿ ನಡೆದಿದೆ.

Advertisement

12 ವರ್ಷದ ಬಾಲಕ ನಾಪತ್ತೆಯಾಗಿರುವ ಕುರಿತು ಅವನ ಚಿಕ್ಕಪ್ಪ ಡಿಸೆಂಬರ್ 9 ರಂದು ದೂರು ನೀಡಿದ್ದರು. ಮೊಬೈಲ್‌ನಲ್ಲಿ PUBG ಮತ್ತು ಇತರ ಆನ್‌ಲೈನ್ ಆಟಗಳನ್ನು ಆಡುವ ಚಟ ಹೊಂದಿದ್ದ ತನ್ನ ಸೋದರಳಿಯ ಡಿ. 9 ರಿಂದ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸೋದರ ಸಂಬಂಧಿಗಳು ಒಟ್ಟಿಗೆ ಆಟವಾಡುತ್ತಿದ್ದರು ಎಂದು ಮೃತ ಬಾಲಕನ ಚಿಕ್ಕಪ್ಪ ಹೇಳಿದ ಹೇಳಿಕೆಯಿಂದ ಎಚ್ಚೆತ್ತ ಪೊಲೀಸರು 16 ವರ್ಷದ ಯುವಕನನ್ನು ವಿಚಾರಣೆಗೆ ಒಳಪಡಿಸಿದ್ದಾಗ , ಇಬ್ಬರೂ ಆನ್‌ಲೈನ್ ಗೇಮ್‌ಗಳನ್ನು ಆಡುವಾಗ ಹಣಕ್ಕಾಗಿ ಜಗಳವಾಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಮೃತನ ಚಿಕ್ಕಪ್ಪನಿಂದ 5 ಲಕ್ಷ ರೂ. ಆನ್‌ಲೈನ್ ಆಟಗಳಿಗೆ ಪಾವತಿ ಟೋಕನ್‌ಗಳನ್ನು ಖರೀದಿಸಲು ಸುಲಿಗೆ ಮಾಡಲು ಅವನು ಯೋಜಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಆನ್‌ಲೈನ್ ಗೇಮಿಂಗ್ ಟೋಕನ್‌ಗಳನ್ನು ಖರೀದಿಸಲು ಅವನು ತನ್ನ ಸೋದರ ಸಂಬಂಧಿಗೆ ಸ್ವಲ್ಪ ಹಣವನ್ನು ಸಾಲವಾಗಿ ನೀಡಿದ್ದ. ಅದನ್ನು ಹಿಂದಿರುಗಿಸಲು ವಿಫಲನಾಗಿದ್ದರಿಂದ ಜಗಳ ನಡೆದು ಸಿಟ್ಟಿಗೆದ್ದು 12 ವರ್ಷದ ಬಾಲಕನನ್ನು ಕೊಂದು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next