Advertisement

ಹಾಕಿ: ಭಾರತ ತಂಡದಲ್ಲಿ  12 ಪಂಜಾಬಿಗರು

09:14 AM Jan 12, 2018 | Team Udayavani |

ಹೊಸದಿಲ್ಲಿ: ಜ. 17ರಿಂದ ನ್ಯೂಜಿಲ್ಯಾಂಡ್‌ನ‌ಲ್ಲಿ ಆರಂಭವಾಗಲಿರುವ ನಾಲ್ಕು ರಾಷ್ಟ್ರಗಳ ಹಾಕಿ ಕೂಟಕ್ಕೆ 20 ಆಟಗಾರರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ 12 ಮಂದಿ ಪಂಜಾಬಿಗಳೇ ಸ್ಥಾನ ಪಡೆದಿದ್ದಾರೆ. 

Advertisement

ಭಾರತದ ಹಾಕಿ ಕಣಜ ಎಂಬ ಖ್ಯಾತಿ ಗಳಿಸಿರುವ ಪಂಜಾಬ್‌, ರಾಷ್ಟ್ರೀಯ ತಂಡಕ್ಕೆ ಕೊಡುಗೆ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ.  ಆಯ್ಕೆಯಾದ 12 ಮಂದಿ ಪಂಜಾಬಿಗಳಲ್ಲಿ  10 ಆಟಗಾರರು ಜಲಂಧರ್‌ನ “ಸುರ್ಜಿತ್‌ ಹಾಕಿ ಅಕಾಡೆಮಿ’ಯಲ್ಲಿ ತರಬೇತಿ ಪಡೆದಿದ್ದಾರೆ. 

ನಾಯಕ ಮನ್‌ಪ್ರೀತ್‌ ಸಿಂಗ್‌, ರೂಪಿಂದರ್‌ ಪಾಲ್‌ ಸಿಂಗ್‌, ಸತಿºàರ್‌ ಸಿಂಗ್‌, ಕೃಷ್ಣ ಪಾಠಕ್‌, ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌, ಗುರಿಂದರ್‌ ಸಿಂಗ್‌, ಹರ್ಜೀತ್‌ ಸಿಂಗ್‌, ಸಿಮ್ರಾನ್‌ಜಿàತ್‌ ಸಿಂಗ್‌, ಮನ್‌ದೀಪ್‌ ಸಿಂಗ್‌, ರಮಣದೀಪ್‌ ಸಿಂಗ್‌ ಮತ್ತು ದಿಲ್‌ಪ್ರೀತ್‌ ಸಿಂಗ್‌ ಪಂಜಾಬಿನ ಆಟಗಾರರಾಗಿದ್ದಾರೆ. 

ಕೂಟದಲ್ಲಿ ಭಾರತ, ನ್ಯೂಜಿಲ್ಯಾಂಡ್‌, ಬೆಲ್ಜಿಯಂ, ಜಪಾನ್‌ ತಂಡಗಳು ಪಾಲ್ಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next