Advertisement
ರಾಜ್ಯದ 204 ಶಿಶು ಅಭಿವೃದ್ಧಿ ಯೋಜನೆಗಳ ಲ್ಲಿನ 12 ಲಕ್ಷ ಫಲಾನುಭವಿಗಳಿಗೆ 65,911 ಅಂಗನ ವಾಡಿ ಕೇಂದ್ರಗಳ ಮೂಲಕ ಮಧ್ಯಾಹ್ನ ಪೌಷ್ಟಿಕ ಬಿಸಿ ಯೂಟ ವಿತರಿಸಲು ಸಿದ್ಧತೆ ನಡೆದಿದೆ. ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯ ರೆಂದು ನೋಂದಣಿ ಯಾದಂದಿನಿಂದ ಹೆರಿಗೆ ಯಾದ 6 ತಿಂಗಳವರೆಗಿನ ಬಾಣಂತಿಯರಿಗೆ ಈ ಸೌಲಭ್ಯ ಸಿಗಲಿದೆ. ಈಗಾಗಲೇ ಎಚ್.ಡಿ.ಕೋಟೆ, ಜಮಖಂಡಿ, ಮಧುಗಿರಿ, ಮಾನ್ವಿ ತಾಲೂಕುಗಳ 5 ಯೋಜನಾ ಪ್ರದೇಶಗಳ ಅಂಗನವಾಡಿಗಳಲ್ಲಿ ಪ್ರಾಯೋಗಿಕ ವಾಗಿ ಯೋಜನೆ ಜಾರಿಯಾಗಿದ್ದು, ಉಳಿದೆಡೆ ಅ.2 ರಿಂದ ಆರಂಭವಾಗಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಯುನಿಸೆಫ್ ಸಂಸ್ಥೆ ಸಹಯೋಗದಲ್ಲಿ ಯೋಜನೆ ಜಾರಿಗೊಳಿಸುತ್ತಿದೆ.
Related Articles
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್‌ಐಎನ್) ಪ್ರಕಾರ ಗರ್ಭಿಣಿಯರು ನಿತ್ಯ ಊಟದಲ್ಲಿ 2,580 ಕ್ಯಾಲರಿ, 78 ಗ್ರಾಂ ಪ್ರೋಟಿನ್ ಹಾಗೂ 1,200 ಮಿ.ಗ್ರಾಂನಷ್ಟು ಕ್ಯಾಲ್ಸಿಯಂ ಸೇವಿಸುವ ಅಗತ್ಯವಿದೆ. ಅದರಂತೆ ಮಾತೃಪೂರ್ಣ ಯೋಜನೆಯಡಿ ಪೌಷ್ಟಿಕ ಬಿಸಿಯೂಟದಲ್ಲಿ ಗರ್ಭಿಣಿಯರಿಗೆ 1342 ಕ್ಯಾಲರಿ, 41 ಗ್ರಾಂ ಪ್ರೋಟಿನ್ ಹಾಗೂ 578 ಮಿ.ಗ್ರಾಂ. ಕ್ಯಾಲ್ಸಿಯಂ ಸಿಗಲಿದೆ. ಅನ್ನ, ಸಾಂಬಾರ್, ಪಲ್ಯದ ಜತೆಗೆ ಬೇಯಿಸಿದ ಮೊಟ್ಟೆ ಹಾಗೂ 200. ಮಿ.ಲೀ. ಹಾಲು, ಬೆಲ್ಲ ಹಾಗೂ ಕಡಲೆಬೀಜದ ಬμì ನೀಡಲಾಗುತ್ತದೆ. ತಿಂಗಳಿಗೆ 25 ದಿನ ಊಟ ವಿತರಿಸಲಾಗುತ್ತದೆ. ಮೊಟ್ಟೆ ಸೇವಿಸದವರಿಗೆ ಮೊಳಕೆಕಾಳು ವಿತರಿಸಲಾಗುತ್ತದೆ. 100 ದಿನ ಕಬ್ಬಿನಾಂಶ ಮಾತ್ರೆ ನೀಡಲಾಗುವುದು. 8 ತಿಂಗಳು ತುಂಬಿದ ಹಾಗೂ ಹೆರಿಗೆಯಾದ 45 ದಿನದ ಬಾಣಂತಿಯರಿಗೆ ಮನೆಗೆ ಊಟ ತಲುಪಿಸುವ ವ್ಯವಸ್ಥೆ ಇರಲಿದೆ.
Advertisement