ಒಡಿಶಾ: ಮಕರ ಸಂಕ್ರಾಂತಿ ಹಬ್ಬ ಆಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಿಂದ ಇಬ್ಬರು ಮಕ್ಕಳು ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಒಡಿಶಾದ ಕಟಕ್ ನಲ್ಲಿ ಶನಿವಾರ ಸಂಭವಿಸಿದೆ.
ಮಕರ ಸಂಕ್ರಾಂತಿಯನ್ನು ಆಚರಿಸಲು ಲಕ್ಷಾಂತರ ಮಂದಿ ಭಕ್ತರು ಸಿಂಗನಾಥ ದೇವಸ್ಥಾನದಲ್ಲಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಒಡಿಶಾದ ಅತಿ ಉದ್ದದ ಸೇತುವೆಯಾದ ಬದಂಬಾ-ಗೋಪಿನಾಥಪುರ ಟಿ ಸೇತುವೆ ಮೇಲೆ ಸುಮಾರು 2 ಲಕ್ಷಕ್ಕೂ ಹೆಚ್ಚು ಭಕ್ತರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾನದಿ ದ್ವೀಪದಲ್ಲಿರುವ ದೇವಾಲಯದಲ್ಲಿ ಸಿಂಹನಾಥನ ದರ್ಶನ ಪಡೆಯಲು ಭಕ್ತರು ಮುನ್ನುಗ್ಗುತ್ತಿದ್ದ ವೇಳೆ ಕಾಲ್ತುಳಿತ ಸಂಭವಿಸಿದೆ.
ಸೇತುವೆಯ ಮೇಲೆ ಲಕ್ಷಾಂತರ ಮಂದಿ ಭಕ್ತರು ಸೇರಿರುವುದರಿಂದ ಅವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಹಾಗಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಅಥಗಢದ ಸಬ್ ಕಲೆಕ್ಟರ್ ಹೇಮಂತ್ ಕುಮಾರ್ ಸ್ವೈನ್ ಹೇಳಿದರು.
ಗಾಯಾಳುಗಳನ್ನು ಕಟಕ್ ಪಟ್ಟಣದ ಎಸ್‌ಸಿಬಿ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ:ಮಳೆಗಾಲದಲ್ಲಿ ನೀರಿನಲ್ಲಿ ಮುಳುಗುತ್ತೆ, ಬೇಸಗೆ ಕಾಲದಲ್ಲಿ ನೈಜ್ಯ ರೂಪಕ್ಕೆ ಬರುತ್ತೆ ಈ ಚರ್ಚ್!