Advertisement
ಬೆಳ್ತಂಗಡಿ ಪಟ್ಟಣಕ್ಕೆ ಒಳಪಟ್ಟಂತೆ ಈಗಾಗಲೇ ಇರುವ ಬಸ್ ತಂಗುದಾಣ ಬಹಳಷ್ಟು ಕಿರಿದಾಗಿದೆ. ಪ್ರಸ್ತುತ ಇರುವ ಬಸ್ ನಿಲ್ದಾಣದ ಹಿಂದಿನ ಭಾಗ ಸೇರಿಸಿ ಒಟ್ಟು 1.20 ಎಕ್ರೆ ಜಾಗದಲ್ಲಿ ಬಸ್ ತಂಗುದಾಣ ನಿರ್ಮಾಣ ವಾಗಲಿದೆ. ಬೆಳ್ತಂಗಡಿ ತಾಲೂಕಿನ 81 ಗ್ರಾ.ಪಂ. ಗೆ ಒಳಪಟ್ಟಂತೆ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ಒಳಪಟ್ಟ ಧರ್ಮಸ್ಥಳ ಕೇಂದ್ರವಾಗಿಸಿ ಕೆಎಸ್‌ಆರ್‌ಟಿಸಿ ಡಿಪೋ ಸಹಿತ ಬಸ್ ನಿಲ್ದಾಣ ವ್ಯವಸ್ಥೆ ಈ ಹಿಂದೆಯೇ ನಿರ್ಮಾಣವಾಗಿದೆ. ರಾಜ್ಯದ ಮೂಲೆ ಮೂಲೆಗೂ ಇಲ್ಲಿಂದ ಬಸ್ ಸಂಚರಿಸುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗ ನಿರತರು, ಜನಸಾಮಾನ್ಯರು ನಿತ್ಯ ಸಂಚರಿಸುವ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಯಾವುದೇ ಅಗತ್ಯ ಸೌಲಭ್ಯಗಳಿಲ್ಲ. ಈ ಎಲ್ಲ ಯೋಜನೆಗಳೊಂದಿಗೆ ಭವಿಷ್ಯದ ಬಸ್ ನಿಲ್ದಾಣವಾಗಿ 12 ಕೋ. ರೂ. ವೆಚ್ಚದ ಆಧುನಿಕ ಶೈಲಿಯ ಕಟ್ಟಡ ಮುಕುಟಪ್ರಾಯವಾಗಲಿದೆ.
Related Articles
Advertisement
ಪ್ರಸಕ್ತ ಬಸ್ ನಿಲ್ದಾಣದ ಜಾಗವು ಪ.ಪಂ. ಸೇರಿದ್ದಾಗಿದ್ದು ಇಲ್ಲಿ ಹಲವು ಬಾಡಿಗೆ ಅಂಗಡಿಕೋಣೆಗಳಿವೆ. ಅವುಗಳ ಸ್ಥಳಾಂತರಕ್ಕೆ ಮಾಲಕರಿಗೆ ನೋಟಿಸ್ ನೀಡಲಾಗಿದೆ. ಇವರಿಗೂ ಅಗತ್ಯ ಸೌಲಭ್ಯ ಒದಗಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ.
ಸುಸಜ್ಜಿತ ನಿಲ್ದಾಣ: ಬೆಳ್ತಂಗಡಿಯ ದೂರದೃಷ್ಟಿ ಅಭಿವೃದ್ಧಿ ಚಿಂತನೆ ಇಟ್ಟುಕೊಂಡು ನೂತನ ಬಸ್ ನಿಲ್ದಾಣ ರಚನೆಗೆ ಸರಕಾರದ ಮುಂದೆ ಪ್ರಸ್ತಾವನೆ ಇಡಲಾಗಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಅವರು 12 ಕೋ.ರೂ. ಅನುದಾನ ಒದಗಿಸಿದ್ದಾರೆ. ನವ ಬೆಳ್ತಂಗಡಿ ಕಲ್ಪನೆಗೆ ಪಟ್ಟಣದ ಹೃದಯ ಭಾಗದಲ್ಲಿ ಸುಸಜ್ಜಿತ ಹಾಗೂ ಭವ್ಯ ಬಸ್ ನಿಲ್ದಾಣ ಮುಕುಟಪ್ರಾಯವಾಗಲಿದೆ. –ಹರೀಶ್ ಪೂಂಜ, ಶಾಸಕರು