Advertisement

12.64 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

06:00 PM Mar 21, 2022 | Team Udayavani |

ಆಳಂದ: ಸುಗಮ ಸಾರಿಗೆ ಸಂಪರ್ಕ ಕಲ್ಪಿಸಲು ಗ್ರಾಮೀಣ ಭಾಗದ ರಸ್ತೆ ನಿರ್ಮಾಣ ಹಾಗೂ ಕುಡಿಯುವ ನೀರಿನ ಕಾಮಗಾರಿಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.

Advertisement

ರುದ್ರವಾಡಿ ಗ್ರಾಮದಲ್ಲಿ ರವಿವಾರ ಪಿಎಂಜೆಎಸ್‌ ವೈ ಅಡಿ 2.55 ಕೋಟಿ ರೂ. ವೆಚ್ಚದದಲ್ಲಿ ರುದ್ರವಾಡಿ, ಬಬಲೇಶ್ವರ 4ಕಿ.ಮೀ ಡಾಂಬರ್‌ ರಸ್ತೆ ಕಾಮಗಾರಿ, ಕೆಕೆಆರ್‌ಡಿಪಿ 44 ಲಕ್ಷ ರೂ. ಅನುದಾನದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ನಾಲ್ಕು ಕೋಣೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮಾರ್ಚ್‌ ಬಜೆಟ್‌ನಲ್ಲಿ ಕಲ್ಯಾಣ ಮಂಟಪ, ರುದ್ರವಾಡಿ ಹೊದಲೂರ ರಸ್ತೆ ಸೇತುವೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಎನ್‌ಇಕೆಆರ್‌ಟಿಸಿ ನಿರ್ದೇಶಕ ಮಲ್ಲಿಕಾರ್ಜುನ, ಗ್ರಾಪಂ ಅಧ್ಯಕ್ಷ ಪ್ರಕಾಶ ಭೂಸಣಗಿ, ಸದಸ್ಯ ಶ್ರೀಶೈಲ ಚಿಟಗೋಟಿ ರುದ್ರವಾಡಿ, ಬಸವರಾಜ ಮೂಲಗೆ, ಗೌತಮ್ಮ ವಾಘೊರೆ, ಪ್ರಮುಖ ಹಿರಿಯ ವಿರೇಂದ್ರ ಮಂಠಾಳೆ, ಗುರುನಾಥ ಹೀರಾ, ರಾಯಪ್ಪ ಮೂಲಗೆ, ವಿಠೊಬ ಕಾಮಶೆಟ್ಟಿ, ಶ್ರೀಧರ ಕೊಟ್ಟರಗಿ, ಶಿವಾನಂದ ಕಟ್ಟಿಕೇರೆ, ಶಿವುಪ್ರಕಾಶ ಹೀರಾ, ಎಇ ಫಜಲ್‌ ಯಶ್ವಂತ ಪಾರಾಣೆ ಮತ್ತಿತರರು ಪಾಲ್ಗೊಂಡಿದ್ದರು.

ಜವಳಗಾ ಜೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಕೈತ್ತಿಕೊಂಡ ಬಾಲಖೇಡನಿಂದ ಬೀಳಗಿ ವರೆಗಿನ ರಾಜ್ಯ ಹೆದ್ದಾರಿ ಸಂಖ್ಯೆ 124ರ 2 ಕೋಟಿ ರೂ. ವೆಚ್ಚದ 1.8 ಕಿ.ಮೀ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿದ ಶಾಸಕರು, ಗಡಿ ಭಾಗದ ಬೇಡಿಕೆಗಳಿಗೆ ಸರ್ಕಾರದ ಅನುದಾನ ಬಂದಂತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

Advertisement

ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಜಿಡಗಾ ಕ್ರಾಸ್‌ ನಿಂದ ಮಾದನಹಿಪ್ಪರಗಾ ವರೆಗೆ 5.46 ಕೋಟಿ ರೂ. ವೆಚ್ಚದ 11 ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿಗೆ ಪೂಜೆ ಹಾಗೂ ಧುತ್ತರಗಾಂವ ಗ್ರಾಮದಲ್ಲಿ ಲಾಡ್‌ ಚಿಂಚೋಳಿಯಿಂದ ಮಾದನಹಿಪ್ಪರಗಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ 2 ಕೋಟಿ ರೂ. ವೆಚ್ಚದಲ್ಲಿ 3.6 ಕಿ.ಮೀ ರಸ್ತೆ ಕಾಮಗಾರಿಗೆ ಪೂಜೆ ಕೈಗೊಂಡರು.

ಸುಂಟನೂರ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಎಸ್‌ ಡಿಪಿ ಯೋಜನೆ ಅಡಿಯಲ್ಲಿ 50 ಸಾವಿರ ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್‌ ನಿರ್ಮಾಣದ 20 ಲಕ್ಷ ವೆಚ್ಚದ ಕಾಮಗಾರಿ ಹಾಗೂ ಗ್ರಾಮದಲ್ಲಿ ಲೋ ಕಪಯೋಗಿಯಿಂದ ಸಿಸಿ ರಸ್ತೆ ನಿರ್ಮಾಣಕ್ಕೆ 18 ಲಕ್ಷ ವೆಚ್ಚದ ಕಾಮಗಾರಿಗೆ 25 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ ಶಾಸಕರು ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಬಿಜೆಪಿ ಮುಖ್ಯಡರು, ಗ್ರಾಪಂ ಪ್ರತಿನಿಧಿಗಳು, ಸಂಬಂಧಿತ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next