ಹೊಸದಿಲ್ಲಿ : ಜಮ್ಮು ಕಾಶ್ಮೀರದಲ್ಲಿ ಈ ವರ್ಷ ಈ ತನಕ 116 ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಮಾಡಿವೆ.
ನಿನ್ನೆ ಮಂಗಳವಾರ ಹತನಾದ ಎಲ್‌ಇಟಿ ಉಗ್ರ ಅಬು ದುಜಾನಾ 115ನೇ ಉಗ್ರನಾದರೆ ಆತನ ಜತೆಗೆ ಮಡಿದ ಆರಿಫ್ ಲಿಲ್‌ಹಾರಿ 116ನೇ ಉಗ್ರನಾಗಿದ್ದಾನೆ.
ಭದ್ರತಾ ಪಡೆಗಳಲ್ಲಿ ಉನ್ನತ ಮೂಲಗಳು ಹಂಚಿಕೊಂಡಿರುವ ಮಾಹಿತಿಗಳ ಪ್ರಕಾರ ಈ ವರ್ಷ ಜನವರಿ 1ರಿಂದ ಜುಲೈ 31ರ ವರೆಗೆ ಜಮ್ಮು ಕಾಶ್ಮೀರದಲ್ಲಿ ಹತರಾದ ಉಗ್ರರ ಸಂಖ್ಯೆ 114. 2016ರಲ್ಲಿ ಇದೇ ಅವಧಿಯಲ್ಲಿ ಹತರಾದ ಉಗ್ರರ ಸಂಖ್ಯೆ 92 ಎಂದು ಗೊತ್ತಾಗಿದೆ.
2017ರ ಜುಲೈ ತಿಂಗಳೊಂದರಲ್ಲೇ ಹತರಾದ ಉಗ್ರರ ಸಂಖ್ಯೆ 22. ಜುಲೈ 22ರ ವರೆಗೆ ಹತ್ಯೆಗೈಯಲ್ಪಟ್ಟ ಉಗ್ರರ ಸಂಖ್ಯೆ 92 ಎಂದು ಭದ್ರತಾ ಮೂಲಗಳ ಮಾಹಿತಿ ತಿಳಿಸುತ್ತದೆ.
ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಾಗ ಜಮ್ಮು ಕಾಶ್ಮೀರದಲ್ಲಿ 2012ರಲ್ಲಿ ಹತರಾದ ಉಗ್ರರ ಸಂಖ್ಯೆ 72 ಮತ್ತು 2013ರಲ್ಲಿ ಹತರಾದ ಉಗ್ರರ ಸಂಖ್ಯೆ 67.
ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದ 2014ರಲ್ಲಿ ಹತರಾದ ಉಗ್ರರ ಸಂಖ್ಯೆ 110; 2015ರಲ್ಲಿ 108, 2016ರಲ್ಲಿ 150 ಎಂದು ಸೇನಾ ಮೂಲಗಳು ಹೇಳಿವೆ.