ಬೆಂಗಳೂರು: ರಾಜ್ಯದಲ್ಲಿ ಹೊಸ ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ ಶತಕ ಮೀರಿದೆ. ಇಂದು ಹೊಸ 116 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಅನ್ಯರಾಜ್ಯ ಪ್ರಯಾಣಿಕರ ಸಂಖ್ಯೆಯೆ ಹೆಚ್ಚಿದೆ.
ಉಡುಪಿ ಜಿಲ್ಲೆಯಲ್ಲಿ 27 ಪ್ರಕರಣಗಳು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು, ಮಂಡ್ಯ 15 , ಹಾಸನದಲ್ಲಿ 13, ಬಳ್ಲಾರಿ 11, ಉತ್ತರ ಕನ್ನಡ 7, ಶಿವಮೊಗ್ಗ 6, ದಾವಣಗೆರೆ 3 ಬೆಳಗಾವಿ 9, ಧಾರವಾಡ 6, ಬೆಂಗಳೂರು ನಗರ 7, ಗದಗ, ಚಿಕ್ಕಬಳ್ಳಾಪುರದಲ್ಲಿ ತಲಾ ಎರಡು ಮೈಸೂರು , ತುಮಕೂರಿನಲ್ಲಿ ತಲಾ ಒಂದು ಪ್ರಕರಣ ದೃಢವಾಗಿದೆ.
ರಾಜ್ಯದ ಒಟ್ಟು 116 ಪ್ರಕರಣಗಳ ಪೈಕಿ 25 ಮಂದಿ ಹತ್ತು ವರ್ಷದ ಕೆಳಗಿನ ಮಕ್ಕಳಾಗಿದ್ದಾರೆ. ಅದರಲ್ಲೂ ಉಡುಪಿಯಲ್ಲೇ 16 ಮಕ್ಕಳಿಗೆ ಸೋಂಕು ತಾಗಿದೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.
ರಾಜ್ಯದ ಹೆಚ್ಚಿನ ಸೋಂಕಿತರು ಅನ್ಯ ರಾಜ್ಯಗಳಿಂದ ಬಂದವರಾಗಿದ್ದಾರೆ. ದಕ್ಷಿಣ ಕನ್ನಡದ ಆರು ಸೋಂಕು ಪ್ರಕರಣಗಳು ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಈ ಆರು ಜನರು ಯುಎಇದಿಂದ ಬಂದವರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1578ಕ್ಕೆ ಏರಿದೆ. ಇದರಲ್ಲಿ 41 ಜನರು ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ. ಓರ್ವ ಸೋಂಕಿತ ಕೋವಿಡ್ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾನೆ.