Advertisement
ಶತಮಾನೋತ್ತರ ಶಾಲೆಧೂಳಂಗಡಿ ಶಾಲೆ 1903ರಲ್ಲಿ ಸ್ಥಾಪನೆಗೊಂಡಿದ್ದು, ಈ ಭಾಗದ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಗೆ ಇದೆ. ಅನೇಕ ಮಂದಿ ಉನ್ನತ ಸ್ಥಾನ ತಲುಪಿದವರು ಇಲ್ಲಿನ ಹಳೆ ವಿದ್ಯಾರ್ಥಿಗಳಾಗಿದ್ದಾರೆ. ಆದರೆ ಶಾಲೆಯ ಈಗಿನ ಸ್ಥಿತಿ ಮಾತ್ರ ಶೋಚನೀಯ.
ಸಮಸ್ಯೆಗಳು ಹಲವು
ಈ ಶಾಲೆಯಲ್ಲಿ ಎರಡು ಕಟ್ಟಡಗಳಿದ್ದು ಒಂದು ಶತಮಾನಗಳ ಹಿಂದೆ ನಿರ್ಮಾಣಗೊಂಡ ಹಳೆಯ ಕಟ್ಟಡ ಹಾಗೂ ಇನ್ನೊಂದು ನಾಲ್ಕೈದು ದಶಕಗಳ ಹಿಂದೆ ನಿರ್ಮಾಣಗೊಂಡ ಕಟ್ಟಡವಾಗಿದೆ. ಶತಮಾನ ಕಂಡ ಹಳೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ನೀರು ಸೋರುತ್ತಿದೆ. ಹೀಗಾಗಿ ಹಲವು ಸಮಯದ ಹಿಂದೆ ಇಲ್ಲಿ ತರಗತಿ ನಡೆಸುವುದನ್ನು ನಿಲ್ಲಿಸಿ ಎರಡನೇ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಅಂದಿನಿಂದ ಇಕ್ಕಟ್ಟಾದ ಕೋಣೆಯಲ್ಲಿ ತರಗತಿಗಳನ್ನು ನಡೆಸಬೇಕಾದ ಅನಿವಾರ್ಯತೆ ಇದೆ.
ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ಹಾಗೂ ರಂಗಮಂದಿರವನ್ನು ನಿರ್ಮಿಸುವಂತೆ ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಣಾಭಿಮಾನಿಗಳು ಹಲವು ಬಾರಿ ಮನವಿ ಸಲ್ಲಿಸಿದರು. ಅದರಂತೆ ಹಿಂದೊಮ್ಮೆ ಹೊಸ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರಾಗಿದೆ ಎನ್ನುವ ಭರವಸೆ ಕೂಡ ದೊರೆತಿತ್ತು. ಆದರೆ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ ಹೊರತು ಫಲ ದೊರಕಿಲ್ಲ. ವಿದ್ಯುತ್ ಶಾಕ್
ಜೋರಾಗಿ ಮಳೆ ಬಂದರೆ ತರಗತಿ ಕೋಣೆಯ ತನಕ ನೀರು ಬರುತ್ತದೆ. ವಿದ್ಯುತ್ ವಯರಿಂಗ್ ಸಮಸ್ಯೆಯಿಂದ ಆಗಾಗ ಶಾಕ್ ಹೊಡೆಯುತ್ತದೆ. ರಂಗಮಂದಿರದ ವ್ಯವಸ್ಥೆ ಇಲ್ಲ. ಬಾಲಕರಿಗೆ ಸರಿಯಾದ ಶೌಚಾಲಯವಿಲ್ಲ. ಪ್ರಸ್ತುತ ಹಳೆಯ ಕಟ್ಟಡದಲ್ಲಿರುವ ಪಾಳು ಬಿದ್ದ ಶೌಚಾಲಯವೊಂದನ್ನು ಬಳಸಲಾಗುತ್ತಿದೆ.
Related Articles
ಶಾಲೆಯಲ್ಲಿ ಹಲವು ಸಮಸ್ಯೆಗಳಿರುವುದರಿಂದ ಹಲವು ಮಂದಿ ಹೆತ್ತವರು ತಮ್ಮ ಮಕ್ಕಳನ್ನು ಈಗಾಗಲೇ ಬೇರೆ ಶಾಲೆಗೆ ದಾಖಲಿಸಿದ್ದಾರೆ ಹಾಗೂ ಹೊಸದಾಗಿ ದಾಖಲಿಸಲೂ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಾಲ್ಕೈದು ವರ್ಷದ ಹಿಂದೆ 150ರಷ್ಟಿದ ವಿದ್ಯಾರ್ಥಿಗಳ ಸಂಖ್ಯೆ ಇದೀಗ 83ಕ್ಕೆ ಕುಸಿದಿದೆ.
Advertisement
ಮಳೆಗಾಲದಲ್ಲಿ ಸಮಸ್ಯೆನಮ್ಮ ಶಾಲೆಗೆ ಶತಮಾನಗಳ ಇತಿಹಾಸವಿದೆ. ಆದರೆ ಇಲ್ಲಿನ ಕಟ್ಟಡದ ಸಮಸ್ಯೆಯಿಂದ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಇಲ್ಲವಾಗಿದೆ. ಮಳೆಗಾಲದಲ್ಲಿ ಸಮಸ್ಯೆ ಬಹಳಷ್ಟು ಹೆಚ್ಚುತ್ತದೆ. ಬಾಲಕರ ಶೌಚಾಲಯ ಕೂಡ ಸರಿಯಾಗಿಲ್ಲ. ಇದರಿಂದ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
– ಪ್ರಕಾಶ್, ಅಧ್ಯಕ್ಷರು
ಎಸ್.ಡಿ.ಎಂ.ಸಿ. ಧೂಳಂಗಡಿ ಶಾಲೆ ಪರಿಹಾರದ ಭರವಸೆ ದೊರಕಿದೆ
ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅರಿವಿದೆ. ನಾವೂ ಮನವಿ ನೀಡಿದ್ದು, ಪರಿಹಾರದ ಭರವಸೆ ನೀಡಿದ್ದಾರೆ. ಸದ್ಯ ಶಾಲೆಯಲ್ಲಿ ಬಾಲಕಿಯರ ಶೌಚಾಲಯ ನಿರ್ಮಾಣವಾಗುತ್ತಿದೆ.
– ಸೇಸು, ಮುಖ್ಯಶಿಕ್ಷಕಿ ಧೂಳಂಗಡಿ ಶಾಲೆ – ರಾಜೇಶ ಗಾಣಿಗ ಅಚ್ಲಾಡಿ