Advertisement

ಕೋವಿಡ್-19 ಗೆದ್ದ 113 ವರ್ಷದ ಸ್ಪ್ಯಾನಿಷ್ ಮಹಿಳೆ: ಇವರ ಆರೋಗ್ಯದ ಗುಟ್ಟೇನು ಗೊತ್ತಾ ?

08:40 AM May 14, 2020 | Mithun PG |

ಮ್ಯಾಡ್ರಿಡ್: ಸ್ಪೇನ್ ನ 113 ವರ್ಷದ ವೃದ್ಧೆಯೊಬ್ಬರು ಕೋವಿಡ್ -19 ವೈರಸ್ ಅನ್ನು ಜಯಿಸಿದ ಘಟನೆ ನಡೆದಿದೆ. ಇವರು  ವಾಸವಿರುವ ಮನೆಯ ಸುತ್ತಮುತ್ತಲಿನಲ್ಲಿ ಹಲವು ವ್ಯಕ್ತಿಗಳು ಸೊಂಕಿನಿಂದ ಮೃತಪಟ್ಟಿದ್ದು ಕಳೆದ ಏಪ್ರಿಲ್ ನಲ್ಲಿ ಈ ವೃದ್ಧೆ ಕೂಡ ಸೋಂಕಿಗೆ ತುತ್ತಾಗಿದ್ದರು ಎಂದು ಎನ್ ಡಿಟಿವಿ ತಿಳಿಸಿದೆ.

Advertisement

ಮರಿಯಾ ಬ್ರೆನಾಯ್ಸ್ ಎಂಬ ಈ ಮಹಿಳೆ 1907ರಲ್ಲಿ ಅಮೆರಿಕಾದಲ್ಲಿ ಜನಿಸಿದ್ದು ಕಳೆದ 20 ವರ್ಷಗಳಿಂದ ಸ್ಪೇನ್ ನಲ್ಲಿ ನೆಲೆಸಿದ್ದಾರೆ. ಈ ದೇಶದಲ್ಲಿರುವ ಅತೀ ಹಿರಿಯ ವ್ಯಕ್ತಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಏಪ್ರಿಲ್ ನಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಾಗ ಅವರನ್ನು ಪ್ರತ್ಯೇಕ  ಕೋಣೆಯಲ್ಲಿ ಐಶೋಲೇಶನ್ ಮಾಡಲಾಗಿತ್ತು. ಇವರನ್ನು ಪರೀಕ್ಷಿಸಲು ಒಬ್ಬರು  ಆರೋಗ್ಯ ಸಿಬ್ಬಂದಿಗೆ ಮಾತ್ರ ಅವಕಾಶವಿತ್ತು. ಕಳೆದ ವಾರ ಬಂದ ವರದಿ ನೆಗೆಟಿವ್ ಎಂದಿದ್ದು, ಇದೀಗ ಸೋಂಕಿನಿಂದ ಗುಣಮುಖರಾಗಿ, ಆರೋಗ್ಯದಿಂದಿದ್ದಾರೆ ಎಂದು ಸ್ಪೇನ್ ಮಾಧ‍್ಯಮಗಳು ತಿಳಿಸಿವೆ.

ಮರಿಯಾ ಬ್ರೆನಾಯ್ಸ್ ಅವರಿಗೆ ಮೂರು ಜನ ಮಕ್ಕಳಿದ್ದು , ಇವರ ಸುದೀರ್ಘ ಜೀವನದ ರಹಸ್ಯವೇನು ಎಂಬ ಪ್ರೆಶ್ನೆಯನ್ನು ಯಾರಾದರೂ ಕೇಳಿದರೆ ನಗುಮೊಗದಿಂದಲೇ ‘ಉತ್ತಮ ಆರೋಗ್ಯ” ಎಂದು ಉತ್ತರಿಸುತ್ತಾರೆ.

ಸ್ಪೇನ್  ಕೋವಿಡ್ ಆರ್ಭಟಕ್ಕೆ ತತ್ತರಿಸಿ ಹೋಗಿದ್ದು ಇಲ್ಲಿ 27 ಸಾವಿರಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next