Advertisement

1110 ರೈತರಿಗೆ ಸಹಾಯಧನ

08:22 AM Jun 18, 2020 | mahesh |

ಖಾನಾಪುರ: ಲಾಕ್‌ಡೌನ್‌ ಸಮಯದಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ 464 ನರೇಗಾ ಕಾಮಗಾರಿಗಳು ನಡೆದಿವೆ ಎಂದು ಶಾಸಕಿ ಡಾ.ಅಂಜಲಿ ನಿಂಬಾಳಕರ ಹೇಳಿದರು. ಅವರು ಕೃಷಿ ಇಲಾಖೆ ಸಭಾಗೃಹದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 51 ಪಂಚಾಯತಿ ಮುಖಾಂತರ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿ ಮಾಡಲಾಗಿದೆ. 2019-20 ನೇಸಾಲಿನಲ್ಲಿ ಗೋವಿನಜೋಳ ಬೆಳೆದ ತಾಲೂಕಿನ 1110 ರೈತರಿಗೆ ಸರ್ಕಾರದ 5 ಸಾವಿರ ರೂ. ಸಹಾಯ ಧನ ತಲುಪಿದೆ. ತಾಂತ್ರಿಕ ಸಮಸ್ಯೆಯಿಂದ ಉಳಿದವರಿಗೆ ವಿಳಂಬವಾಗಿದ್ದು, ಸಮಸ್ಯೆ
ಪರಿಹರಿಸಲಾಗುವುದು ಎಂದರು. ಸಹಾಯಕ ಕೃಷಿ ನಿರ್ದೇಶಕ ಡಿ.ಬಿ.ಚವ್ಹಾಣ ಮಾತನಾಡಿ, ವಾಡಿಕೆಗಿಂತ ಹೆಚ್ಚು ಮಳೆ ಈ ವರ್ಷ ಆಗಿದ್ದು ಮಳೆಯ ಕೊರತೆ ಇಲ್ಲ. ಲಾಕ್‌ಡೌನ್‌ ಸಂದರ್ಭದಲ್ಲಿ ಮೆಣಸಿನ ಬೆಳೆ ದರ ಕುಸಿತದಿಂದ ರೈತರಿಗೆ ಉಂಟಾದ ನಷ್ಟ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next