Advertisement
ಡಿ.24ರಿಂದ ಜ.3ರ ವರೆಗೆ ಆಗಮಿಸಿದ 19,227 ಅಂತಾರಾಷ್ಟ್ರೀಯ ಪ್ರಯಾಣಿಕರ ಪೈಕಿ 124 ಪ್ರಯಾಣಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಅವರನ್ನು ಐಸೋಲೇಶನ್‌ನಲ್ಲಿ ಇಡಲಾಗಿದೆ. 40 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವುಗಳಲ್ಲಿ 14 ಸ್ಯಾಂಪಲ್‌ಗಳಲ್ಲಿ ಎಕ್ಸ್‌ಬಿಬಿ ಮತ್ತು ಒಂದು ಸ್ಯಾಂಪಲ್‌ನಲ್ಲಿ ಬಿಎಫ್ 7.4.1 ಉಪತಳಿ ಪತ್ತೆಯಾಗಿದೆ ಎಂದು ವಿವರಿಸಿದ್ದಾರೆ.
ಕೊರೊನಾ ಸೋಂಕಿಗೆ ಒಳಗಾದ ಪುರುಷರಲ್ಲಿನ ವೀರ್ಯದ ಗುಣಮಟ್ಟಕ್ಕೆ ತೊಂದರೆ ಉಂಟಾಗಲಿದೆ ಎಂಬುದು ಅಧ್ಯಯನದಿಂದ ದೃಢವಾಗಿದೆ. ಪಾಟ್ನಾದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯು 30 ಮಂದಿ ಪುರುಷರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಈ ಅಂಶ ಬಹಿರಂಗವಾಗಿದೆ. ಇದೇ ವೇಳೆ ಕೊರೊನಾ ವೈರಸ್ ಮಾನವನ ಆಂತರಿಕ ಬಹುಅಂಗಗಳಿಗೆ ಹಾನಿ ಉಂಟು ಮಾಡಲಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.