ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಮಧ್ಯಾಹ್ನದವರೆಗೂ ಹೊಸದಾಗಿ 11 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢವಾಗಿದ್ದು, ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ.
ಇಂದು ಬಾಗಲಕೋಟೆ, ಕಲಬುರಗಿಯಲ್ಲಿ ತಲಾ ಮೂರು ಮಂದಿಗೆ, ಬೆಂಗಳೂರು ನಗರದಲ್ಲಿ ಇಬ್ಬರಿಗೆ, ಬೆಂಗಳೂರು ನಗರದಲ್ಲಿ ಇಬ್ಬರಿಗೆ, ಚಿಕ್ಕಬಳ್ಳಾಪುರ, ಬೆಳಗಾವಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.
ಇನ್ನು ಭಾನುವಾರ ಸಾವಿಗೀಡಾಗಿದ್ದ ವಿಜಯಪುರದ ವೃದ್ಧ (69) (ಸೋಂಕಿತೆ ವೃದ್ಧೆಯ ಪತಿ) ನಿಗೂ ಸೋಂಕು ತಗುಲಿತ್ತು ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
ಈ ಮೂಲಕ ರಾಜ್ಯದಲ್ಲಿ ಕೋವಿಡ್-19 ದಿಂದ ಜೀವ ಕಳೆದುಕೊಂಡವರ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ. ಸೋಂಕು ಆರಂಭದಿಂದ ಇಲ್ಲಿಯವರೆಗೂ ರಾಜ್ಯದಲ್ಲಿ 65 ಮಂದಿ ಗುಣಮುಖರಾಗಿದ್ದು, 184 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ, 9 ಮಂದಿ ಸಾವಿಗೀಡಾಗಿದ್ದಾರೆ.
ಹಿಂದುಪುರದಿಂದ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡಿದ್ದ 26 ವರ್ಷದ ಬೆಂಗಳೂರು ನಗರದ ವ್ಯಕ್ತಿಗೆ ಸೋಂಕು ತಾಗಿರುವುದು ದೃಢವಾಗಿದೆ.