ಕೋಲ್ಕತಾ : ಪಶ್ಚಿಮ ಬಂಗಾಲದಲ್ಲಿನ ಬಿಜೆಪಿಯ ಯುವ ದಳದ ನಾಯಕ ಯೋಗೇಶ್ ವಾರ್ಷ್‌ನೇಯ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಜೀವ ಬೆದರಿಕೆ ಹಾಕಿದ್ದು ಆಕೆಯ ತಲೆಗೆ 11 ಲಕ್ಷ ರೂ.ಗಳ ಇನಾಮು ಘೋಷಿಸಿದ್ದಾನೆ.
ಮೊನ್ನೆ ಭಾನುವಾರ ಕೋಲ್ಕತಾದಿಂದ ಸುಮಾರು 180 ಕಿ.ಮೀ. ದೂರದಲ್ಲಿರುವ ಬೀರಭೂಮ್‌ನಲ್ಲ ಹನುಮಾನ್ ಜಯಂತಿ ಪ್ರಯುಕ್ತ ನಡೆಸಲಾಗುತ್ತಿದ್ದ ರಾಲಿಯ ಮೇಲೆ ಪೊಲೀಸರು ಲಾಠೀ ಜಾರ್ಜ್ ಮಾಡಿರುವುದನ್ನು ವಿರೋಧಿಸಿರುವ ಬಿಜೆಪಿ ಯುವ ಮೋರ್ಚಾ ನಾಯಕ ವಾರ್ಷ್‌ನೇಯ, ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೆ ಜೀವ ಬೆದರಿಕೆ ಒಡ್ಡಿ ಆಕೆಯ ತಲೆಗೆ 11 ಲಕ್ಷ ರೂ. ಇನಾಮು ಪ್ರಕಟಿಸಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.
ನಿಷೇಧಾಜ್ಞೆ ಇದ್ದ ಹೊರತಾಗಿಯೂ ಅದನ್ನು ಧಿಕ್ಕರಿಸಿ ಶಾಂತಿಯುತವಾಗಿ ನಡೆಯುತ್ತಿದ್ದ ರಾಲಿಯ ಮೇಲೆ ಪೊಲೀಸರು ನಿರ್ದಯರಾಗಿ ಲಾಠೀ ಚಾರ್ಜ್ ನಡೆಸಿ ಕ್ರೌರ್ಯ ಮೆರೆದಿದ್ದಾರೆ. ಇದು ಖಂಡನೀಯ. ಇದನ್ನು ನಡೆಸಿರುವ ಮಮತಾ ಬ್ಯಾನರ್ಜಿ ನಿಜಕ್ಕೂ ಒಬ್ಬ ರಾಕ್ಷಸಿ. ಪೊಲೀಸರ ಕ್ರೌರ್ಯದ ವಿಡಿಯà ನೋಡಿ ನಾನು ದಂಗಾದೆ. ಒಡನೆಯೇ ನನಗನ್ನಿಸಿತು : ಯಾರದಾರೂ ಮಮತಾಳ ತಲೆ ಕಡಿದು ತಂದರೆ ಅವರಿಗೆ 11 ಲಕ್ಷ ರೂ. ಇನಾಮು ಕೊಡಬೇಕು ಎಂದು. ಮಮತಾ ಬ್ಯಾನರ್ಜಿ ನಿಜಕ್ಕೂ ಹಿಂದುಗಳನ್ನು ಗುರಿ ಇರಿಸಿ ದಾಳಿ ಮಾಡುತ್ತಿದ್ದಾರೆ ಎಂದು ವಾರ್ಷ್‌ನೇಯ ದೂರಿದರು.
ರಾಜ್ಯದಲ್ಲಿ ಈಚೆಗೆ ರಾಮ ನವಮಿ ಮತ್ತು ಹನುಮಾನ್ ಜಯಂತಿ ಸಂದರ್ಭ ನಡೆಸಲಾದ ರಾಲಿಯ ವೇಳೆ ಗೌಜಿ, ಗಲಾಟೆ, ಗದ್ದಲ, ಹೊಡೆದಾಟ ನಡೆದಿರುವುದು ವರದಿಯಾಗಿದೆ.
ಹನುಮಾನ್ ರಾಲಿಯ ವೇಳೆ ನಡೆದಿದ್ದ ಹೊಡೆದಾಟದಲ್ಲಿ ನಾಲ್ವರು ಗಾಯಗೊಂಡಿದ್ದರು.