ಬೆಂಗಳೂರು: ಲೋಕ ಸಮರಕ್ಕೆ ಸಿಎಂ ಕುಮಾರಸ್ವಾಮಿ “ರಂಗಪ್ರವೇಶ’ ಮಾಡಿದ್ದು, ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಹಂತದಿಂದಲೇ ಕಾರ್ಯತಂತ್ರ ರೂಪಿಸಲು ಮುಂದಾಗಿದ್ದಾರೆ. ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಕೈ ಮೇಲಾಗುವುದನ್ನು ತಡೆಯುವುದು, ಜೆಡಿಎಸ್‌ಗೆ ಹೆಚ್ಚು ಸೀಟು ಪಡೆದು ಎಲ್ಲ ಕ್ಷೇತ್ರಗಳಲ್ಲೂಗೆಲ್ಲುವುದು, ಆ ಮೂಲಕ ಜೆಡಿಎಸ್‌ನ ಶಕ್ತಿ ವೃದಿಟಛಿಸಿಕೊಳ್ಳು ವುದು ಇದರ ಉದ್ದೇಶ. ಒಂದೊಮ್ಮೆ ಕಾಂಗ್ರೆಸ್ ಜತೆ ಮೈತ್ರಿ ಮುರಿದು ಬಿದ್ದರೂ ಸ್ವತಂತ್ರವಾಗಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಜ್ಜಾಗಲೂ ಸಿಎಂ ಸೂಚಿಸಿದ್ದಾರೆ.
ಚುನಾವಣೆಯ ನೇತೃತ್ವ ವಹಿಸಿದರೆ ರಾಜ್ಯದಲ್ಲಿ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ರುವುದರಿಂದ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆ ಮುಂದಿಟ್ಟು ಮತದಾರರನ್ನು ಸೆಳೆಯುವುದು ಕುಮಾರಸ್ವಾಮಿ ಲೆಕ್ಕಾಚಾರ. ಹೀಗಾಗಿ, ಸೀಟು ಹಂಚಿಕೆಕುರಿತು ರಾಹುಲ್ ಗಾಂಧಿ ಜತೆ ದೇವೇಗೌಡರು ಮಾತುಕತೆ ನಡೆಸುವ ವೇಳೆ ಎಚಿxಕೆ ಸಹ ಭಾಗಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಶನಿವಾರ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬೆಂಗಳೂರು ಗ್ರಾ.ಹಾಗೂಬೆಂಗಳೂರು ಕ್ಷೇತ್ರಗಳ ಮುಖಂಡರ ಜತೆ ಪೂರ್ವಭಾವಿ ಸಭೆ ನಡೆಸಿದ್ದಾರೆ. ಈಗಿನ ಲೆಕ್ಕಾಚಾರದ ಪ್ರಕಾರ ಜೆಡಿಎಸ್‌ಗೆ ಮಂಡ್ಯ, ಹಾಸನ, ಶಿವಮೊಗ್ಗ, ಬೆಂಗಳೂರು ಉತ್ತರ, ಮೈಸೂರು ಕ್ಷೇತ್ರಗಳು ಸಿಗುವುದು ನಿಶ್ಚಿತ. ಜತೆಗೆ ಬೀದರ್, ವಿಜಯಪುರ, ಉಡುಪಿ-ಚಿಕ್ಕಮಗಳೂರು, ರಾಯಚೂರು, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಬೇಡಿಕೆ ಇಡಲು ತೀರ್ಮಾನಿಸಲಾಗಿದೆ.
12 ಕ್ಷೇತ್ರಗಳಿಗೆ ಪಟ್ಟು ಹಿಡಿದರೆ 10 ಅಥವಾ 9 ಕ್ಷೇತ್ರವಾದರೂ ಸಿಗಬಹುದು ಎಂಬ ನಿರೀಕ್ಷೆ ಜೆಡಿಎಸ್‌ನದು. ಆದರೆ ಜೆಡಿಎಸ್ ಅನ್ನು 6 ಸ್ಥಾನಕ್ಕೆ ಸೀಮಿತ ಗೊಳಿಸಲು ಕಾಂಗ್ರೆಸ್‌ನ ಒಂದು ಗುಂಪು ಪ್ರಯತ್ನಿಸುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಕ್ಷೇತ್ರಗಳಲ್ಲಿ ಪಂಚಾಯಿತಿ ಮಟ್ಟದಿಂದ ಪ್ರಬಲ ಸಂಘಟನೆ ಹೊಂದಿದ್ದರೂ ಬಿಟ್ಟುಕೊಡಲು ಒಪ್ಪುತ್ತಿಲ್ಲ. ಜೆಡಿಎಸ್‌ಗೆ ಶಕ್ತಿ ಇರುವ ಕಡೆ ಬಿಟ್ಟು ಬಿಜೆಪಿ ಪ್ರಬಲವಾಗಿರುವ ಕ್ಷೇತ್ರ ಕೊಡಲು ತಂತ್ರ ರೂಪಿಸಲಾಗಿದೆ ಎಂಬ ಅನುಮಾನ ಜೆಡಿಎಸ್‌ಗಿದೆ.
ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳು ಮಂಡ್ಯ -ನಿಖೀಲ್‌ಗೌಡ/ ಶಿವರಾಮೇಗೌಡ /ಲಕ್ಷ್ಮಿ ಅಶ್ವಿನ್‌ಗೌಡ, ಹಾಸನ-ಪ್ರಜ್ವಲ್ ರೇವಣ್ಣ, ಬೆಂಗಳೂರು ಉತ್ತರ ಕ್ಷೇತ್ರ-ಎಚ್.ಡಿ.ದೇವೇಗೌಡ, ಶಿವಮೊಗ್ಗ- ಮಧು ಬಂಗಾರಪ್ಪ, ತುಮಕೂರು-ರಮೇಶ್‌ಬಾಬು / ಎಂ.ಟಿ.ಕೃಷ್ಣಪ್ಪ/ ಕೆ.ಎಸ್.ರಂಗಪ್ಪ/ ಹರೀಶ್‌ಗೌಡ, ಬೀದರ್- ಪಿ.ಜಿ.ಆರ್.ಸಿಂಧ್ಯ, ರಾಯಚೂರು- ರಾಜಾ ರಂಗಪ್ಪ ನಾಯಕ್, ಚಿತ್ರದುರ್ಗ-ತಿಮ್ಮರಾಯಪ್ಪ, ಚಿಕ್ಕಬಳ್ಳಾಪುರ- ನಿವೃತ್ತ ನ್ಯಾ. ಗೋಪಾಲಗೌಡ. ಉಡುಪಿ-ಚಿಕ್ಕಮಗಳೂರು ಬಿಟ್ಟುಕೊಟ್ಟರೆ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಕರೆತರಲು ಚಿಂತನೆ.
ಎಸ್. ಲಕ್ಷ್ಮಿನಾರಾಯಣ