Advertisement

ದಕ್ಷಿಣ ಚಿಲಿ ಗ್ರಾಮ ಕೆಸರು ಮಣ್ಣಲ್ಲಿ ಸಮಾಧಿ: 11 ಸಾವು

10:42 AM Dec 18, 2017 | udayavani editorial |

ಸ್ಯಾಂಟಿಯಾಗೋ : ಅಭೂತಪೂರ್ವ ಪ್ರಮಾಣದಲ್ಲಿ ಕೆಸರು ಮಣ್ಣು ಕುಸಿದ ದುರಂತದಲ್ಲಿ ದಕ್ಷಿಣ ಚಿಲಿಯ ಒಂದು ಗ್ರಾಮ ಬಹುತೇಕ ಕೆಸರು ಮಣ್ಣಿನಡಿ ಹುಗಿದು ಹೋಗಿದ್ದು ಕನಿಷ್ಠ 11 ಮಂದಿ ಮೃತಪಟ್ಟು ಇತರ ಸುಮಾರು 15 ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ದಕ್ಷಿಣ ಚಿಲಿಯ ಸದರ್ನ್ ಲಾಸ್‌ ಲ್ಯಾಗೋಸ್‌ (ಸರೋವರಗಳ) ಪ್ರಾಂತ್ಯದಲ್ಲಿನ ವಿಲಾ ಸ್ಯಾಂಟಾ ಲೂಸಿಯಾ ಎಂಬ ಅತ್ಯಂತ ನಯನ ಮನೋಹರ ಪ್ರಾಕೃತಿಕ ಸೌಂದರ್ಯದ ಗ್ರಾಮದ ಬಹುಪಾಲು ಕೆಸರು ಮಣ್ಣಿನಡಿ ಹೂತುಹೋಗಿದೆ. ಈ ಗ್ರಾಮದ ಹೆಚ್ಚಿನ ಮನೆಗಳಲ್ಲಿ ಸಮಾಧಿಯಗಿವೆ.

ಸುಮಾರು 300 ಕುಟುಂಬಗಳು ವಾಸಿಸಿಕೊಂಡಿದ್ದ ಈ ಗ್ರಾಮದಲ್ಲಿ ಈ ತನಕ ಕೇವಲ 10 ಕುಟುಂಬಗಳನ್ನು ಮಾತ್ರವೇ ಸ್ಥಳಾಂತರಿಸಲು ಸಾಧ್ಯವಾಗಿದೆ.

ನಿನ್ನೆ ಭಾನುವಾರ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡಲು ಈ ಗ್ರಾಮಸ್ಥರಿಗೆ ಸಾಧ್ಯವಾಗಿರಲಿಲ್ಲ. ಮಾಜಿ ಅಧ್ಯಕ್ಷ ಸೆಬಾಸ್ಟಿಯನ್‌ ಪಿನೇರಾ ಅವರು ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next