Advertisement
ಸೆನ್ಸೆಕ್ಸ್ 1190, ನಿಫ್ಟಿ 360 ಅಂಕ ಪತನ: ಹೂಡಿಕೆದಾರರಿಗೆ ನಷ್ಟದಿನದಾರಂಭದ ಏರಿಕೆಯ ಹೊರತಾಗಿಯೂ ಭಾರತೀಯ ಷೇರುಪೇಟೆ ಗುರುವಾರ( ನ28) ಕುಸಿತವನ್ನು ದಾಖಲಿಸಿದೆ. ಸೆನ್ಸೆಕ್ಸ್ 1190.34 ಅಂಕ ಕುಸಿದು 79043.74ರಲ್ಲಿ ವ್ಯವಹಾರ ಮುಗಿಸಿತು. ಅದೇ ರೀತಿ, ನಿಫ್ಟಿ ಕೂಡ 360.75 ಅಂಕ ಕುಸಿದು 23914.15ರಲ್ಲಿ ತನ್ನ ದಿನದ ವಹಿವಾಟು ಪೂರ್ಣಗೊಳಿಸಿತು. ಜಾಗತಿಕ ಷೇರುಪೇಟೆಗಳ ಕುಸಿತದ ಪರಿಣಾಮ ರಿಲಯನ್ಸ್ ಇಂಡ್ಸ್ಟ್ರೀಸ್, ಎಚ್ಡಿಎಫ್ಸಿ ಬ್ಯಾಂಕ್ ಸೇರಿ ಕೆಲವು ಪ್ರಮುಖ ಷೇರುಗಳಲ್ಲಿ ಕುಸಿತವಾಗಿದ್ದೇ ಷೇರುಪೇಟೆ ತಲ್ಲಣಕ್ಕೆ ಕಾರಣವಾಗಿದೆ. ಹೀಗಾಗಿ, ಹೂಡಿಕೆದಾರರ ಸಂಪತ್ತು 1.50 ಲಕ್ಷ ಕೋಟಿ ರೂ. ನಷ್ಟವಾಗಿದೆ. ಅದಾನಿ ಗ್ರೂಪ್ನ 11 ಕಂಪನಿಗಳ ಷೇರುಗಳ ಪೈಕಿ 5 ಕಂಪನಿಗಳ ಷೇರುಗಳು ಭಾರೀ ಏರಿಕೆಯನ್ನು ದಾಖಲಿಸಿವೆ.