Advertisement

ಬೀದರ್‌ ಜಿಲ್ಲೆಯಲ್ಲಿಂದು ಮತ್ತೆ 11 ಕೋವಿಡ್‌-19 ಸೋಂಕು ದೃಢ

07:47 PM Jun 15, 2020 | Sriram |

ಬೀದರ್‌: ಗಡಿ ನಾಡು ಬೀದರ್‌ನಲ್ಲಿ ಕೋವಿಡ್-19 ಆರ್ಭಟ ಮುಂದುವರೆದಿದ್ದು, ಸೋಮವಾರ ಮಹಾರಾಷ್ಟ್ರ ಜತೆಗೆ ತೆಲಂಗಾಣ ಕಂಟಕದಿಂದ ಮತ್ತೆ 11 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇನ್ನೊಂದೆಡೆ 36 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 351 ಕ್ಕೆ ಏರಿಕೆ ಆಗಿದೆ.

Advertisement

ದಿನದಿಂದ ದಿನಕ್ಕೆ ಕೋವಿಡ್-19 ಪಾಟಿಸಿವ್ ಸಂಖ್ಯೆ ಹೆಚ್ಚುತ್ತಲೇ ಇದ್ದು, ಗ್ರಾಮೀಣ ಭಾಗದಲ್ಲಿ ತನ್ನ ಕರಾಳ ಛಾಯೆ ಆವರಿಸುತ್ತಿದೆ. ಸೋಮವಾರ ಮತ್ತೆ ಬಸವಕಲ್ಯಾಣ ತಾಲೂಕಿನಲ್ಲಿ ವೈರಾಣು ಬಾಧಿತರ ಸಂಖ್ಯೆ ಹೆಚ್ಚಿರುವುದು ಆ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಒಟ್ಟು ಸೋಂಕಿತ 11 ಜನರಲ್ಲಿ ಮೂವರು ತೆಲಂಗಾಣದಿಂದ ಹಿಂದಿರುಗಿದ್ದರೆ, ಇನ್ನುಳಿದ 5 ಮಂದಿ ಮಹಾರಾಷ್ಟ್ರದ ಸಂಪರ್ಕದಿಂದಾಗಿ ರೋಗ ಒಕ್ಕರಿಸಿದೆ.

ಬಸವಕಲ್ಯಾಣ ತಾಲೂಕಿನ ಉಮಾಪೂರ ಗ್ರಾಮದ 3, ಹೊನ್ನಳ್ಳಿ ಗ್ರಾಮದ 2 ಸೇರಿ ಒಟ್ಟು 5 ಕೇಸ್, ಔರಾದ ತಾಲೂಕಿನ ಠಾಣಾಕುಶನೂರ ಗ್ರಾಮದ 3, ಜಮಲಾಪೂರ 1 ಸೇರಿ ಒಟ್ಟು 4 ಕೇಸ್, ಕಮಲನಗರ ತಾಲೂಕಿನ ನಿಟ್ಟೂರ್ ಗ್ರಾಮದ 2 ಕೇಸ್‌ಗಳು ಪತ್ತೆಯಾಗಿವೆ. 27 ವರ್ಷದ ಹೆಣ್ಣು ಪಿ 7082, 63 ವರ್ಷದ ಗಂಡು ಪಿ 7083, 35ವರ್ಷದ ಗಂಡು ಪಿ 7084, 19 ವರ್ಷದ ಗಂಡು ಪಿ 7085, 27ವರ್ಷದ ಗಂಡು ಪಿ 7086, 25 ವರ್ಷದ ಹೆಣ್ಣು ಪಿ 7087, 40 ವರ್ಷದ ಹೆಣ್ಣು ಪಿ 7088, 15ವರ್ಷದ ಗಂಡು ಪಿ 7089 ಮಹಾರಾಷ್ಟ್ರದ ಸಂಪರ್ಕ ಹಾಗೂ 30 ವರ್ಷದ ಗಂಡು ಪಿ 7090, 25 ವರ್ಷದ ಹೆಣ್ಣು ಪಿ 7091ಮತ್ತು 40 ವರ್ಷದ ಹೆಣ್ಣು ಪಿ 7092 ರೋಗಿಗಳು ತೆಲಂಗಾಣದ ಸಂಪರ್ಕ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ ಈಗ 351 ಆದಂತಾಗಿದೆ. ಒಟ್ಟು 6 ಜನ ಸಾವನ್ನಪ್ಪಿದ್ದರೆ, 239 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 136 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next