Advertisement

Nov. 26 ರಂದು ಶ್ರೀ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರದ ದಶಮಾನೋತ್ಸವ

12:59 PM Nov 23, 2023 | Team Udayavani |

ಮಂಗಳೂರು: ನಗರದ ಮಂಗಳಾದೇವಿಯ ಶ್ರೀ ಮೂಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರದ ದಶಮಾನೋತ್ಸವ ಸಮಾರಂಭ ಶ್ರೀ ಮಂಗಳಾದೇವಿ ದೇವಸ್ಥಾನದ ಅಂಗಣದೊಳಗೆ ನ. 26ರಂದು ನಡೆಯಲಿದೆ.

Advertisement

ಆ ಪ್ರಯುಕ್ತ “ತ್ರಿಜನ್ಮ ಮೋಕ್ಷ” ಕನ್ನಡ ಯಕ್ಷಗಾನ ಬಯಲಾಟ ನಡೆಯಲಿದೆ. ಯಕ್ಷಗಾನ ಬಯಲಾಟದ ಪೂರ್ವಭಾವಿಯಾಗಿ ಬೆಳಗ್ಗೆ 9 ರಿಂದ 10.30 ರವರೆಗೆ ಪಡೀಲ್ ನ ಷಣ್ಮುಖಪ್ರಿಯ ಭಜನಾ ತಂಡದಿಂದ ಭಜನಾ ಕಾರ್ಯಕ್ರಮವಿದೆ. 10.30 ಕ್ಕೆ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಆರಂಭವಾಗಿ 11.30 ರಿಂದ ಖ್ಯಾತ ಭಾಗವತ ದಯಾನಂದ್ ಕೋಡಿಕಲ್ ಮತ್ತು ಶಿಷ್ಯ ವೃಂದದವರಿಂದ ಯಕ್ಷಗಾನರ್ಚನೆ ನಡೆದು ಬಳಿಕ ಮಧ್ಯಾಹ್ನ 2 ಗಂಟೆಯಿಂದ ಜಿಲ್ಲೆಯ ಖ್ಯಾತ ಯಕ್ಷಗಾನ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ “ನರಕಾಸುರ ಮೋಕ್ಷ” ನಡೆದು, ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷರಾಗಿ ಲಯನ್ ರಮಾನಂದ ನೂಜಿಪ್ಪಾಡಿ, ಮುಖ್ಯಅತಿಥಿಗಳಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಮತ್ತು ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ದಿ| ಚಂದ್ರಶೇಖರ ಬಲ್ಯಾಯ ಸಂಸ್ಮರಣಾ ಪ್ರಶಸ್ತಿ, ಸಾಧಕರಿಗೆ ಸನ್ಮಾನ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಗುರುವಂದನೆ ಕಾರ್ಯಕ್ರಮದ ನಂತರ “ತ್ರಿಜನ್ಮ ಮೋಕ್ಷ ” ಕನ್ನಡ ಯಕ್ಷಗಾನ ಬಯಲಾಟ ಕಾರ್ಯಕ್ರಮ ಆಯೋಜಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next