Advertisement

ವಿವಿಯಲ್ಲಿ 10,000ಕ್ಕೂ ಹೆಚ್ಚು ಅಪರೂಪದ ಪುಸ್ತಕಗಳನ್ನು ಕದ್ದ ಕಳ್ಳರು!

07:39 PM Sep 21, 2022 | Team Udayavani |

ಲಕ್ನೋ: ಉತ್ತರ ಪ್ರದೇಶದ ರಾಂಪುರದಲ್ಲಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ ಅವರ ಮೊಹಮದ್‌ ಅಲಿ ಜವ್ಹಾರ್‌ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿದ್ದ 10 ಸಾವಿರಕ್ಕೂ ಹೆಚ್ಚು ಅಪರೂಪದ ಪುಸ್ತಕಗಳು ಕಳವು ಮಾಡಲಾಗಿದೆ ಎಂಬ ವಿಚಾರ ಈಗ ಬಹಿರಂಗವಾಗಿದೆ.

Advertisement

ಕದ್ದ ಪುಸ್ತಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಂಪುರದ 200 ವರ್ಷಗಳಷ್ಟು ಹಳೆಯ ಮದರಸಾದಲ್ಲಿದ್ದ 10,633 ಪುಸ್ತಕಗಳನ್ನು 2016ರಲ್ಲಿ ಕಳ್ಳತನ ಮಾಡಲಾಗಿತ್ತು. ಅಜಂ ಖಾನ್‌ ನಿರ್ದೇಶನದಂತೆ ಅಲ್ಲಿಂದ ಪುಸ್ತಕ ಕಳ್ಳತನ ಮಾಡಲಾಗಿತ್ತು ಎಂದು ದೂರಲಾಗಿದೆ.

2019ರಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, 7 ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ಅಜಂ ಖಾನ್‌ ಪುತ್ರನ ಸ್ನೇಹಿತರೂ ಇದ್ದರು. ಅವರ ಹೇಳಿಕೆಯ ಆಧಾರದಲ್ಲಿ ವಿಶ್ವವಿದ್ಯಾಲಯದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಅಲ್ಲಿದ್ದ ಪುಸ್ತಕಗಳನ್ನು ವಶ ಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next