ಹೊಸದಿಲ್ಲಿ: ಫೆಬ್ರವರಿ 18ರಂದು ಚೆನ್ನೈಯಲ್ಲಿ ನಡೆಯಲಿರುವ 2021ರ ಐಪಿಎಲ್ ಹರಾಜಿನಲ್ಲಿ 1,097 ಮಂದಿ ಕ್ರಿಕೆಟಿಗರು ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಭಾರತದ 814 ಹಾಗೂ ವಿದೇಶದ 283 ಆಟಗಾರರು ಸೇರಿದ್ದಾರೆ. ಫ್ರಾಂಚೈಸಿಗಳಿಗೆ 61 ಆಟಗಾರರ ಅಗತ್ಯವಿದೆ.
ವಿದೇಶಿಗರಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟಿಗರದು ಸಿಂಹಪಾಲು. ಇಲ್ಲಿನ 56 ಆಟಗಾರರು ಹರಾಜು ವ್ಯಾಪ್ತಿಯಲ್ಲಿದ್ದಾರೆ. ಅನಂತರದ ಸ್ಥಾನ ಆಸ್ಟ್ರೇಲಿಯಕ್ಕೆ ಸಲ್ಲುತ್ತದೆ (42). ಉಳಿದಂತೆ ದಕ್ಷಿಣ ಆಫ್ರಿಕಾದ 38, ಶ್ರೀಲಂಕಾದ 31, ನ್ಯೂಜಿಲ್ಯಾಂಡಿನ 29, ಇಂಗ್ಲೆಂಡಿನ 21 ಆಟಗಾರರಿದ್ದಾರೆ.
ಇವರನ್ನು ಹೊರತುಪಡಿಸಿ ಯುಎಇಯ 9, ನೇಪಾಲದ 8, ಸ್ಕಾಟ್ಲೆಂಡಿನ 7, ಬಾಂಗ್ಲಾದೇಶದ 5 ಕ್ರಿಕೆಟಿಗರು ಐಪಿಎಲ್ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಉಳಿದಂತೆ ಐರ್ಲೆಂಡ್, ಯುಎಸ್‌ಎ, ಜಿಂಬಾಬ್ವೆಯ ಆಟಗಾರರೂ ಇದ್ದಾರೆ.
ಎಲ್ಲ ಫ್ರಾಂಚೈಸಿಗಳು ಗರಿಷ್ಠ 25 ಆಟಗಾರರನ್ನು ಹೊಂದಿರಲಿದ್ದು, ಆಗ ಹರಾಜಿನಲ್ಲಿ 61 ಆಟಗಾರರಷ್ಟೇ ಮಾರಾಟವಾಗಲಿದ್ದಾರೆ. ಇದರಲ್ಲಿ 22 ಆಟಗಾರರು ವಿದೇಶಿಗರು ಎಂದು ಬಿಸಿಸಿಐ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ದಾವಣಗೆರೆ : ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 1.47 ಕೋಟಿ ರೂ. ವಶ