ಬಾಗಲಕೋಟೆ: ರಾಜ್ಯದ ಜನರ ಆರೋಗ್ಯ ಸೇವೆಗೆ ಆರೋಗ್ಯ ಕವಚ ಯೋಜನೆಯಡಿ 108 ತುರ್ತು ಆ್ಯಂಬುಲೆನ್ಸ್ ಸೇವೆಯ ನಿರ್ವಹಣೆ ಮಾಡುತ್ತಿರುವ ಜಿವಿಕೆ ಸಂಸ್ಥೆಯ ಟೆಂಡರ್ ಅವಧಿ ಪೂರ್ಣಗೊಂಡಿದ್ದು, ಮತ್ತೆ 3 ತಿಂಗಳು ವಿಸ್ತರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದರು.
ಆಲಮಟ್ಟಿಯಲ್ಲಿ ಭಾನುವಾರಸುದ್ದಿಗೋಷ್ಠಿ ನಡೆಸಿದ ಅವರು, ಹಲವು ವರ್ಷಗಳಿಂದ ರಾಜ್ಯ ದಲ್ಲಿ108 ಆ್ಯಂಬುಲೆನ್ಸ್ ನಿರ್ವಹಣೆ ಹಾಗೂ ತುರ್ತು ಆರೋಗ್ಯ ಸೇವೆ ನೀಡಲು ಜಿವಿಕೆ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಈ ಅವಧಿಯಲ್ಲಿ ಜಿವಿಕೆ ಸಂಸ್ಥೆ ಹಲವಾರು ಲೋಪದೋಷ ಮಾಡಿರುವುದು ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.
ಈ ಯೋಜನೆಯಡಿ 108 ನಿರ್ವಹಣೆ ಹಾಗೂ ತುರ್ತು ಆರೋಗ್ಯ ಸೇವೆಗೆ ಹೊಸ ಸಂಸ್ಥೆಯೊಂದಿಗೆ ಟೆಂಡರ್ ಒಪ್ಪಂದ
ಆಗುವರೆಗೂ ಜಿವಿಕೆ ಸಂಸ್ಥೆಗೆ ಮತ್ತೆ 3 ತಿಂಗಳು ಅವಧಿ ವಿಸ್ತರಿಸಲಾಗಿದೆ. ಸದ್ಯ ಹೊಸದಾಗಿ ಜಾಗತಿಕ ಟೆಂಡರ್ ಆಹ್ವಾನಿಸಲಾಗಿದೆ ಎಂದರು.
ದೇಶದಲ್ಲಿ ಜಿವಿಕೆ ಸಂಸ್ಥೆಯೊಂದಿಗೆ ಇನ್ನೆರಡು ಸಂಸ್ಥೆಗಳು ಮಾತ್ರ 108 ಆರೋಗ್ಯ ಕವಚ ಯೋಜನೆ ನಿರ್ವಹಣೆಗೆ ಅರ್ಹತೆ ಹೊಂದಿವೆ.
ಜಿವಿಕೆ ಸಂಸ್ಥೆ ಹೊರಗಾಗಿ ಬೇರೆ ಯಾವುದೇ ಸಂಸ್ಥೆ ಹಿಂದಿನ ಟೆಂಡರ್‌ನಲ್ಲಿ ಭಾಗವಹಿಸಲಿ ರಲಿಲ್ಲ. ಈ ಬಾರಿಯೂ ಟೆಂಡರ್ ಆಹ್ವಾನಿಸಿದ್ದು, ಒಂದು ವೇಳೆ ಟೆಂಡರ್ ಒಪ್ಪಂದ ಆಗದಿದ್ದರೆ ಸರ್ಕಾರವೇ 108 ಆರೋಗ್ಯ ಕವಚ ಯೋಜನೆ ನಿರ್ವಹಿಸಲು ಸಿದ್ಧವಿದೆ. ಈ ಯೋಜನೆಯಡಿ ಈಗಿರುವ ಆ್ಯಂಬುಲೆನ್ಸ್‌ಗಳು ಹಳೆಯದಾಗಿದ್ದು,ಹೊಸದಾಗಿ 400 ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಆ್ಯಂಬುಲೆನ್ಸ್‌ಗಳಿಗೆ ಅಗತ್ಯವಿದ್ದಂತೆ ಬಿಡಿ ಭಾಗಗಳ ಅಳವಡಿಕೆ ಕಾರ್ಯ ನಡೆದಿದೆ ಎಂದರು.