Advertisement

Arogya Kavach”108′ ನೌಕರರಿಗೆ 4 ತಿಂಗಳಿನಿಂದ ವೇತನವಿಲ್ಲ

11:38 PM Oct 08, 2023 | Team Udayavani |

ಕುಂದಾಪುರ: ಸರಕಾರದ”108 – ಆರೋಗ್ಯ ಕವಚ’ ಯೋಜನೆ ಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಒಟ್ಟಾರೆ 3,500 ನೌಕರರಿಗೆ 4 ತಿಂಗಳಿನಿಂದ ವೇತನ ಲಭಿಸದೆ ಜೀವನ ನಿರ್ವಹಣೆಗೆ ಸಂಕಷ್ಟ ಎದುರಾಗಿದೆ.

Advertisement

“108’ರ ಚಾಲಕರು (ಪೈಲಟ್‌) ಹಾಗೂ ನರ್ಸ್‌ಗಳಿಗೆ ಜೂನ್‌ನಿಂದ ಸೆಪ್ಟಂಬರ್‌ ತನಕ ವೇತನ ಬಾಕಿಯಿದೆ.

ಸರಕಾರ – ಸಂಸ್ಥೆ
ನಡುವೆ ಗೊಂದಲ
ಸರಕಾರದಿಂದ ಹಣ ಬಿಡುಗಡೆಯಾಗ ಬೇಕಿದೆ ಎಂದು ಈ”108 – ಆರೋಗ್ಯ ಕವಚ’ ಯೋಜನೆ ಯನ್ನು ನಿರ್ವಹಿಸುತ್ತಿರುವ ಜಿವಿಕೆ- ಇಎಂಆರ್‌ಐ ಸಂಸ್ಥೆಯವರು ಹೇಳಿ ದರೆ, ಕೊಡಬೇಕಿರುವ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ ಎಂದು ಸರಕಾರ ಹೇಳುತ್ತದೆ. ಈಗೊಂದಲದಿಂದಾಗಿ ಸಮಸ್ಯೆ ಅನುಭವಿಸುತ್ತಿರುವವರು ಮಾತ್ರ ಬಡ ಸಿಬಂದಿ. ಸರಕಾರ 3 ತಿಂಗಳಿ ಗೊಮ್ಮೆ 40.60 ಕೋ.ರೂ. ಗಳನ್ನು ಈ ಸಂಸ್ಥೆಗೆ ನೀಡುತ್ತಿದೆ; ಆದರೆ 58 ಕೋ.ರೂ. ನೀಡ ಬೇಕು ಎಂದು ಜಿವಿಕೆ- ಇಎಂಆರ್‌ಐ ಸಂಸ್ಥೆ ಹೇಳುತ್ತಿದೆ. ಇದರಿಂದ ವಿಳಂಬ ಆಗುತ್ತಿದೆ ಎನ್ನಲಾಗಿದೆ.

ಹಿಂಬಾಕಿಯೂ ಸಿಕ್ಕಿಲ್ಲ
ಕಳೆದ ವರ್ಷದ ಆಗಸ್ಟ್‌ ವರೆಗೆ 108 ಆ್ಯಂಬುಲೆನ್ಸ್‌ ನೌಕರರಿಗೆ 12 ಸಾವಿರ ರೂ.ನಿಂದ ಆರಂಭಗೊಂಡು ಜ್ಯೇಷ್ಠತೆ ಆಧಾರದಲ್ಲಿ ಗರಿಷ್ಠವೆಂದರೆ 17 ಸಾವಿರ ರೂ. ವೇತನ ನೀಡಲಾಗು ತ್ತಿತ್ತು. ಆದರೆ ನೌಕರರ ಹೋರಾಟದ ಬಳಿಕ ವೇತನವನ್ನು ಆಗಸ್ಟ್‌ನಿಂದ ಏರಿಸಲಾಗಿದೆ. ಇದು 3 ವರ್ಷಗಳ ಹಿಂದಿನಿಂದಲೇ ಅನ್ವಯ ಎಂದು ನಿರ್ಧರಿಸಿದ್ದರೂ ಆ ಹಿಂಬಾಕಿ ಹಣ ಇನ್ನೂ ಪಾವತಿಯಾಗಿಲ್ಲ.ಅದಕ್ಕಾಗಿ ಒಟ್ಟಾರೆ 40 ಕೋ.ರೂ. ಅಗತ್ಯವಿದ್ದು, ಸರಕಾರದಿಂದ ಬಿಡುಗಡೆ ಆಗಬೇಕಿದೆ.

ಉಡುಪಿ,ದ.ಕ.: 49 ಆ್ಯಂಬುಲೆನ್ಸ್‌ ; 160 ಸಿಬಂದಿ
ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಬ್ರಹ್ಮಾವರ ತಲಾ 4, ಬೈಂದೂರು, ಕಾರ್ಕಳದ ತಲಾ 3, ಉಡುಪಿ, ಕಾಪುವಿನ ತಲಾ 2 ಹಾಗೂ ಹೆಬ್ರಿ ತಾಲೂಕಿನಲ್ಲಿ 1 ಸೇರಿದಂತೆ ಒಟ್ಟು 19 108 ಆ್ಯಂಬುಲೆನ್‌ಗಳಿವೆ. 45 ಚಾಲಕರು ಹಾಗೂ 18 ನರ್ಸ್‌ಗಳಿದ್ದಾರೆ. ದ.ಕ. ಜಿಲ್ಲೆಯ ಮಂಗಳೂರಿನಲ್ಲಿ 9, ಬಂಟ್ವಾಳದಲ್ಲಿ 6, ಬೆಳ್ತಂಗಡಿ, ಸುಳ್ಯದಲ್ಲಿ ತಲಾ 4, ಪುತ್ತೂರಿನಲ್ಲಿ 3, ಕಡಬ, ಮೂಡುಬಿದಿರೆಯಲ್ಲಿ ತಲಾ 2 ಆ್ಯಂಬುಲೆನ್ಸ್‌ ಗಳಿವೆ. ಇದರಲ್ಲಿ 58 ಚಾಲಕರು ಹಾಗೂ 39 ನರ್ಸ್‌ಗಳಿದ್ದಾರೆ.

Advertisement

ವೇತನ ಬಾಕಿ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಆರೋಗ್ಯ ಸಚಿವರು ಹಾಗೂ ಇಲಾಖೆಯ ಆಯುಕ್ತರನ್ನು ಭೇಟಿಯಾಗಿ ವಿನಂತಿಸಿಕೊಳ್ಳಲಾಗಿದೆ. 1 ತಿಂಗಳ ವೇತನ ಶೀಘ್ರ ಪಾವತಿಸುವ ಭರವಸೆ ಲಭಿಸಿದೆ.
– ಶ್ರೀಧರ್‌ ಅಧ್ಯಕ್ಷ,
108 ಆ್ಯಂಬುಲೆನ್ಸ್‌ ನೌಕರರ ರಾಜ್ಯ ಹಿತರಕ್ಷಣ ಸಂಘ

ಈಗಾಗಲೇ 39 ಕೋ.ರೂ. ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಸಿಬಂದಿಯ ವೇತನ ಹಾಗೂ ಇಂಧನ ವೆಚ್ಚವನ್ನು ಸರಕಾರದಿಂದ ವಾರದೊಳಗೆ ಪಾವತಿಸಲಾಗುವುದು.
– ಡಿ. ರಂದೀಪ್‌,
ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

 

Advertisement

Udayavani is now on Telegram. Click here to join our channel and stay updated with the latest news.

Next