ಕೆ.ಆರ್.ಪೇಟೆ: ತಾಲೂಕಿನ ವಿವಿಧೆಡೆ ಕ್ವಾರಂಟೈನ್ ಕೇಂದ್ರಲ್ಲಿದ್ದು ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಬಂದ 107 ಮಂದಿಯನ್ನು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಬಿಡುಗಡೆ ಮಾಡಿ ಬೀಳ್ಕೊಟ್ಟರು.
ತಾಲೂಕಿನ ನಗರೂರು- ಮಾರ್ಗೋನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿದ್ದ 49 ಮಂದಿ, ಗವೀಮಠ ವಸತಿ ಶಾಲೆಯಲ್ಲಿದ್ದ 37 ಮಂದಿ, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿದ್ದ 15 ಮಂದಿ ಹಾಗೂ ವಳಗೆರೆಮೆಣಸ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿದ್ದ 6 ಮಂದಿ ಸೇರಿದಂತೆ ಒಟ್ಟು 107 ಮಂದಿ ಕಳೆದ 15 ದಿನಗಳಿಂದ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿ, ಕೋವಿಡ್ -19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದದ್ದರಿಂದ ಅವರ ಸ್ವಗ್ರಾಮಗಳಿಗೆ ತೆರಳಲು ಅನುಮತಿ ಪತ್ರ ನೀಡಿದರು.
ಕೊರೊನಾ ಸೋಂಕನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ವೈಯಕ್ತಿಕ ಸ್ವತ್ಛತೆಗೆ ಒತ್ತು ನೀಡಬೇಕು. ಈಗ ಬಿಡುಗಡೆಯಾಗಿರುವವರು ತಮ್ಮ ಮನೆಗಳಲ್ಲಿಯೇ ಮತ್ತೆ 14 ದಿನ ಹೋಂ ಕ್ವಾರಂಟೈನಲ್ಲಿರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಅಥವಾ ಸೋಪಿನಿಂದ ಆಗಾಗ್ಗೆ ಕೈ ಸ್ವತ್ಛಗೊಳಿಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಗ್ರಾಮಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಮೂರ್ತಿ, ಜಿಲ್ಲಾ ಬಿಸಿಎಂ ಅ ಧಿಕಾರಿ ಸೋಮಶೇಖರ್, ಡಾ.ಮಧುಸೂದನ್, ಜಿಲ್ಲಾ ನೋಡೆಲ್ ಆರೋಗ್ಯಾ ಧಿಕಾರಿ ಡಾ.ಬೆಟ್ಟಸ್ವಾಮಿ, ತಾಲೂಕು ಸಮಾಜ ಕಲ್ಯಾಣಾ ಕಾರಿ ಡಾ.ಮನುಕುಮಾರ್, ತಾಪಂ ಇಒ ಚಂದ್ರಮೌಳಿ, ರಾಜಸ್ವ ನಿರೀಕ್ಷಕ ರಾಜಮೂರ್ತಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ. ನಾರಾಯಣಮೂರ್ತಿ, ತೋಟಗಾರಿಕಾ ಅಧಿ ಕಾರಿ ಡಾ.ಜಯರಾಂ, ಗವೀಮಠ ವಸತಿ ಶಾಲೆಯ ಕೋವಿಡ್-19 ಕ್ವಾರಂಟೈನ್ ನೋಡಲ್ ಅ ಧಿಕಾರಿ ರಾಜಶೇಖರ್ ಮತ್ತಿತರರಿದ್ದರು.
ಕೈ ಮುಗಿದು ಧನ್ಯವಾದ: ವಿವಿಧ ಶಾಲಾ- ಕಾಲೇಜುಗಳಲ್ಲಿ ಕ್ವಾರಂಟೈ ನಲ್ಲಿ ಕೋವಿಡ್ -19 ಪರೀಕ್ಷಾ ವರದಿ ಏನಾಗುವುದೋ ಎಂಬ ಆತಂಕದಲ್ಲಿದ್ದ 107 ಮಂದಿ ಮುಂಬೈ ಕನ್ನಡಿಗರು ಕೊರೊನಾ ಸೋಂಕಿನ ದವಡೆ ಯಿಂದ ಪಾರಾಗಿ ನಿಟ್ಟುಸಿರು ಬಿಟ್ಟರು. 15 ದಿನಗಳಿಂದ ಮನೆಯ ವರಂತೆ ನೋಡಿಕೊಂಡ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಕೃತಜ್ಞತೆ ಅರ್ಪಿಸಿ ಸ್ವಗ್ರಾಮಗಳತ್ತ ಹೆಜ್ಜೆ ಹಾಕಿದರು.