Advertisement
ನಗರದಲ್ಲಿ 2017-18ನೇ ಸಾಲಿನ ಫಲಿತಾಂಶ ಪ್ರಕಟಿಸಿ ಮಾತನಾಡಿದ ಅವರು, ಕಳೆದ ಹಣಕಾಸು ವರ್ಷದಲ್ಲಿ 10 ಲಕ್ಷ ಕೋಟಿ ರೂ.ಕೃಷಿ ಸಾಲ ವಿತರಿಸುವ ಗುರಿ ಇತ್ತು. ಆದರೆ,ಫೆ.28ರವರೆಗೆ ಈ ಗುರಿ ಮೀರಿ 10.46 ಲಕ್ಷ ಕೋಟಿ ರೂ. ಕೃಷಿ ಸಾಲ ವಿತರಿಸಲಾಗಿದ್ದು, ಸಾಲ ವಿತರಣೆ ಪ್ರಮಾಣ ನಿರೀಕ್ಷೆ ಮೀರಿ ಹೆಚ್ಚಳ ಕಂಡಿದೆ. ಅವಧಿ ಸಾಲದಡಿ 3.69 ಲಕ್ಷ ಕೋಟಿ ರೂ., ಬೆಳೆ ಸಾಲದಡಿ 6.76 ಲಕ್ಷ ಕೋಟಿ ರೂ. ವಿತರಿಸಲಾಗಿದೆ ಎಂದು ಹೇಳಿದರು.
ತಿಳಿಸಿದರು. ಬಂಡವಾಳ ರಚನೆಗೆ ಪೂರಕವಾಗಿ ದೀರ್ಘಕಾಲೀನ ಸಾಲ ಹೆಚ್ಚಳ, ಗ್ರಾಮೀಣ ಹಣಕಾಸು ಸಂಸ್ಥೆಗಳಿಗೆ ಬ್ಯಾಂಕಿಂಗ್ ತಂತ್ರಜ್ಞಾನ ಅಳವಡಿಕೆಗೆ ನೆರವು, ನೀರಾವರಿ ಯೋಜನೆ ವ್ಯಾಪ್ತಿ ವಿಸ್ತರಣೆ, ನೀರಾವರಿ ದಕ್ಷತೆ ಹಾಗೂ ಗ್ರಾಮೀಣ ವಸತಿ ಸೌಲಭ್ಯಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವ ಕಾರ್ಯಕ್ಕೆ ಕಳೆದ ವರ್ಷದಲ್ಲಿ ಆದ್ಯತೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.