Advertisement
ಪ್ರವೇಶ ಪರೀಕ್ಷೆಗೆ ಜಿಲ್ಲಾದ್ಯಂತ ಒಟ್ಟು 3,666 ಮಂದಿ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು ಆ ಪೈಕಿ ಬೆಳಗ್ಗೆ 10 ರಿಂದ 11.30ರ ವರೆಗೂ ನಡೆದ ಸಾಮಾನ್ಯ ವಿಷಯ ಪರೀಕ್ಷೆಗೆ 3,666 ಮಂದಿ ಪೈಕಿ 2.647 ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆದು 1,019 ಮಂದಿ ಅಭ್ಯರ್ಥಿಗಳು ಗೈರಾದರೆ ಮಧ್ಯಾಹ್ನ 2 ರಿಂದ 3:30ರ ವರೆಗೂ ನಡೆದ ಸಾಮಾನ್ಯ ಕನ್ನಡ ಹಾಗೂ ಆಂಗ್ಲ ಪರೀಕ್ಷೆಗೆ ನೊಂದಾಯಿತ ಒಟ್ಟು 3,666 ಮಂದಿ ಅಭ್ಯರ್ಥಿಗಳ ಪೈಕಿ 2.634 ಮಂದಿ ಪರೀಕ್ಷೆ ಬರೆದು ಉಳಿದ 1,032 ಪರೀಕ್ಷೆಗೆ ಗೈರಾಗಿದ್ದರೆಂದು ಪರೀಕ್ಷಾ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ “ಉದಯವಾಣಿ’ಗೆ ತಿಳಿಸಿದರು.
Related Articles
Advertisement
ಸರ್‌ಎಂವಿ ಪ್ರೌಢ ಶಾಲೆಯಲ್ಲಿ ಒಟ್ಟು 360 ಅಭ್ಯರ್ಥಿಗಳ ಪೈಥಕಿ 270 ಮಂದಿ ಪರೀಕ್ಷೆ ಬರೆದು 90 ಮಂದಿ ಗೈರಾದರೆ, ಮಧ್ಯಾಹ್ನ 269 ಮಂದಿ ಪರೀಕ್ಷೆ ಬರೆದು 91 ಮಂದಿ ಗೈರಾಗಿದ್ದರು. ಬಿಜಿಎಸ್ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ ಒಟ್ಟು 360 ಮಂದಿ ಅಭ್ಯರ್ಥಿಗಳು ನೋಂದಾಯಿಸಿಕೊಂಡು ಪರೀಕ್ಷೆಗೆ 253 ಮಂದಿ ಹಾಜರಾಗಿ ಉಳಿದ 107 ಮಂದಿ ಗೈರಾದರೆ, ಮಧ್ಯಾಹ್ನ 252 ಮಂದಿ ಪರೀಕ್ಷೆ ಬರೆದು 108 ಮಂದಿ ಗೈರಾಗಿದ್ದರು.
ನಗರದ ವಾಪಸಂದ್ರದ ಜಚನಿ ಕಾಲೇಜಿನಲ್ಲಿ ಒಟ್ಟು 264 ಮಂದಿ ನೊಂದಾಯಿತ ಅಭ್ಯರ್ಥಿಗಳ ಪೈಕಿ 178 ಮಂದಿ ಮಾತ್ರ ಪರೀಕ್ಷೆ ಬರೆದು ಉಳಿದ 86 ಅಭ್ಯರ್ಥಿಗಳು ಗೈರಾಗಿದ್ದು, ಮಧ್ಯಾಹ್ನ 178 ಮಂದಿ ಪರೀಕ್ಷೆ ಬರೆದು 86 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದರು.
ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಭದ್ರತೆ: ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ದ್ವೀತಿಯ ದರ್ಜೆ ಸಹಾಯಕರ ಹುದ್ದೆಗಳ ನೇರ ನೇಮಕಾತಿಗಾಗಿ ಪ್ರವೇಶ ಪರೀಕ್ಷೆ ನಡೆಸಿ 8 ಕೇಂದ್ರಗಳಿಗೂ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಪ್ರತಿ ಕೇಂದ್ರಕ್ಕೆ ಪುರುಷ ಹಾಗೂ ಮಹಿಳಾ ವೀಕ್ಷಕರನ್ನು ನೇಮಿಸಲಾಗಿತ್ತು. ಪರೀಕ್ಷಾ ಅಕ್ರಮಗಳನ್ನು ತಡೆಯಲು ಜಿಲ್ಲಾ ಮಟ್ಟದಲ್ಲಿ ಜಾಗೃತ ದಳ ಹಾಗೂ ವೀಕ್ಷಕ ದಳವನ್ನು ನಿಯೋಜಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.