Advertisement

103 ಜನರಿಗೆ ಬೌದ್ಧ ಧರ್ಮ ದೀಕ್ಷೆ

10:38 AM Nov 01, 2021 | Team Udayavani |

ಚಿತ್ರದುರ್ಗ: ಬೆಂಗಳೂರಿನ ಮಹಾಬೋಧಿ ಸಂಸ್ಥೆಯ ಆನಂದ ಬಂತೇಜಿ ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ 103 ಜನರಿಗೆ ಬೌದ್ಧ ಧರ್ಮದ ದೀಕ್ಷೆ ನೀಡಿದರು.

Advertisement

ಈ ಸಂದರ್ಭ ಮಾತನಾಡಿದ ಅವರು, ಬೌದ್ಧ ಎನ್ನುವುದು ಒಂದು ಜಾತಿಯಲ್ಲ, ಧರ್ಮ. ಜಾತಿಯನ್ನು ಮೀರಿದ ತತ್ವಗಳು ಇಲ್ಲಿವೆ. ಪ್ರತಿಯೊಬ್ಬರೂ ಜಾತಿ ಮನೋಭಾವದಿಂದ ಹೊರಗೆ ಬರುವ ಅಗತ್ಯವಿದೆ. ಧರ್ಮ ದೀಕ್ಷೆಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಇದನ್ನು ಸಾಮಾಜಿಕ ಪರಿವರ್ತನೆ ಎಂಬಂತೆ ಬಿಂಬಿಸುವುದು ಬೇಡ ಎಂದರು.

ಬೌದ್ಧ ಧರ್ಮ ಮೂಲತಃ ಭಾರತದಲ್ಲಿ ಜನ್ಮ ತಳೆದ ಧರ್ಮ. ಭಾರತೀಯ ಸಂಸ್ಕೃತಿ, ಆಚಾರ-ವಿಚಾರಗಳು ಇದರಲ್ಲಿ ಬೆಸೆದುಕೊಂಡಿವೆ. ಇದೇ ಉದ್ದೇಶದಿಂದ ಡಾ| ಬಿ.ಆರ್‌. ಅಂಬೇಡ್ಕರ್‌ ಬೌದ್ಧ ಧರ್ಮ ಸ್ವೀಕರಿಸಿದ್ದರು. ಇದರೊಂದಿಗೆ ದೇಶವನ್ನೂ ಉಳಿಸಿದರು. ಅವರು ಬೇರೆ ಧರ್ಮದ ದೀಕ್ಷೆ ತೆಗೆದುಕೊಂಡಿದ್ದರೆ ದೇಶದಲ್ಲಿ ಕ್ಷೋಭೆಯಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಹಿಂದೂ ಧರ್ಮದ 103 ಜನರಿಗೆ ಮಹಾಬೋಧಿ ಸಂಸ್ಥೆಯ ಸಾರಥ್ಯದಲ್ಲಿ ಬೌದ್ಧ ಧರ್ಮ ದೀಕ್ಷೆ ಬೋಧಿಸಲಾಯಿತು. ಉಪಾಸಕ ಹಾಗೂ ಉಪಾಸಕಿಯರಾಗಿ ಬುದ್ಧನ ಮಾರ್ಗದಲ್ಲಿ ಸಾಗುವುದಾಗಿ ಪ್ರತಿಜ್ಞೆ ಮಾಡಿದರು. ಪಂಚಶೀಲ ತತ್ವಗಳನ್ನು ಪಠಿಸುವ ಮೂಲಕ ಹೊಸ ಧರ್ಮಕ್ಕೆ ಪದಾರ್ಪಣೆ ಮಾಡಿದರು. ದೀಕ್ಷೆ ಸ್ವೀಕರಿಸಿದ 103 ಜನರಲ್ಲಿ ಲಿಂಗಾಯತ, ಗೊಲ್ಲ ಸಮುದಾಯದ ತಲಾ ಒಬ್ಬರು ಸೇರಿದಂತೆ ಪರಿಶಿಷ್ಟ ಜಾತಿಯವರೇ ಹೆಚ್ಚಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next