ಮುಂಬಯಿ: ಜನಸಾಮಾನ್ಯರ ಆರ್ಥಿಕ ಪ್ರಗತಿಗೆ ಮೋಡೆಲ್ ಬ್ಯಾಂಕ್ ಸೇವೆ ಅನುಪಮವಾಗಿದೆ. 102 ವರ್ಷಗಳ ನಿರಂತರ ಸೇವೆಯೇ ಮೋಡೆಲ್ ಬ್ಯಾಂಕ್‌ನ ನಿಷ್ಠಾವಂತ ಸೇವೆಗೆ ಕೈಗನ್ನಡಿಯಾಗಿದೆ. ಗ್ರಾಹಕರ ಸಂತೃಪ್ತಿಯೇ ಬ್ಯಾಂಕಿನ ಸಮೃದ್ಧಿಯಾಗಿದೆ. ಬ್ಯಾಂಕುಗಳು ಬರೇ ಹಣಕಾಸು ವ್ಯವಸ್ಥೆ ನಿವಾ ರಿಸುವ ಉದ್ದೇಶವನ್ನಿರಿಸಿ ಸೇವಾ ನಿರತವಾಗದೆ ಜನಸಾಮಾನ್ಯರಿಗೆ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸಹಕಾರಿ ಆದಾಗ ಆರ್ಥಿಕ ಸೇವಾ ಸಂಸ್ಥೆಗಳ ಉದ್ದೇಶ ಫಲಪ್ರದವಾಗುವುದು. ಜಾಗತೀ ಕರಣದ ಈ ಕಾಲದಲ್ಲಿ ಬ್ಯಾಂಕುಗಳಂತಹ ಪಥ ಸಂಸ್ಥೆಗಳು ದಿಟ್ಟತನದಿಂದ ವ್ಯವಹಾರ ನಡೆಸಿ ಮುನ್ನಡೆದಾಗ ಮಾತ್ರ ಬ್ಯಾಂಕುಗಳು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಬಲ್ಲವು. ಆದ್ದರಿಂದ ಮಧ್ಯಮ ವರ್ಗದ ಜನತೆ ಆರ್ಥಿಕ ಸಹಾಯದತ್ತ ಹೆಚ್ಚಿನ ಬ್ಯಾಂಕುಗಳು ಮಹತ್ವ ನೀಡುವುದು ಅತ್ಯವಶ್ಯವಾಗಿದೆ ಎಂದು ಮಂಗ ಳೂರು ರೋಮನ್ ಕ್ಯಾಥೋಲಿಕ್ ಧರ್ಮ ಪ್ರಾಂತ್ಯದ ಬಿಷಪ್ ಅ| ವಂ| ಡಾ| ಪೀಟರ್ ಪಾವ್É ಸಲ್ದಾನ್ಹಾ ಕರೆ ನೀಡಿದರು.
ಸೆ. 29 ರಂದು ಸಂಜೆ ಮಾಹಿಮ್ ಪಶ್ಚಿಮದ ಸೈಂಟ್ ಕ್ಸೇವಿಯರ್ ಎಂಜಿನೀಯರಿಂಗ್ ಕಾಲೇಜು ಸಭಾಗೃಹದಲ್ಲಿ ಕರ್ನಾಟಕ ಕರಾವ ಳಿಯ ಕ್ರೈಸ್ತ ಸಮುದಾಯದ ಧುರೀಣರು ಸ್ಥಾಪಿತ ದಿ. ಮೆಂಗ್ಳೂರಿಯನ್ ಕಥೋಲಿಕ್ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯ ಮಿತ ಪಥಸಂಸ್ಥೆ ಸದ್ಯ ಮೋಡೆಲ್ ಕೋ. ಆಪರೇಟಿವ್ ಬ್ಯಾಂಕ್‌ನ 101 ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ ಶುಭಹಾರೈಸಿದರು.
ಮೋಡೆಲ್ ಬ್ಯಾಂಕಿನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲಿé. ಡಿ’ಸೋಜಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗತ ಸಾಲಿನಲ್ಲಿ ಸುಮಾರು 919.94 ಕೋ. ರೂ. ಗಳ ಭದ್ರತಾ ಠೇವಣಿಯನ್ನು ಬ್ಯಾಂಕ್ ಹೊಂದಿದ್ದು. 510.82 ಕೋ. ರೂ. ಮುಂಗಡ ಠೇವಣಿ, 92.71 ಕೋ. ರೂ. ಸಾಂದ್ರ ಆದಾಯ ಹಾಗೂ ಸುಮಾರು 12.39 ಕೋ. ರೂ. ನಿವ್ವಳ ಲಾಭದೊಂದಿಗೆ ಸುಮಾರು 8.55 ಕೋ. ರೂ. ನೆಟ್ ಪ್ರಾಫಿಟ್ ಪಿಎಟಿಯನ್ನು ಹೊಂದಿದೆ ಎಂದು ನುಡಿದು, ಶೇರುದಾರರಿಗೆ ವಾರ್ಷಿಕ ಶೇ. 9ರಷ್ಟು ಡಿವಿಡೆಂಡ್ ಘೋಷಿಸಿದರು.
ಬಿಷಪ್ ಪೀಟರ್ ಸಲ್ದಾನ್ಹಾ ಮತ್ತು ಬ್ಯಾಂಕ್‌ನ ಸಂಸ್ಥಾಪಕಾಧ್ಯಕ್ಷ ಜೋನ್ ಡಿ’ಸಿಲ್ವಾ, ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಅವರಿಗೆ ಕಾರ್ಯಾಧ್ಯಕ್ಷ ಆಲ್ಬರ್ಟ್ ಸ್ಮರಣಿಕೆ, ಪುಷ್ಪಗುತ್ಛವನ್ನು ಪ್ರದಾನಿಸಿ ಗೌರವಿಸಿದರು. ಮಹಾಸಭೆಯ ಆದಿಯಲ್ಲಿ ಬಿಷಪ್ ಸಲ್ದಾನ್ಹಾ ಬ್ಯಾಂಕ್‌ನ ವಾರ್ಷಿಕ ಅಭಿವಂದನಾ ದಿವ್ಯಪೂಜೆ ನೆರವೇರಿಸಿ ಆಶೀರ್ವದಿಸಿದರು.
ಬ್ಯಾಂಕಿನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ಮಾಜಿ ಉಪಕಾರ್ಯಾಧ್ಯಕ್ಷ, ನಿರ್ದೇಶಕರಾದ ವಿನ್ಸೆಂಟ್ ಮಥಾಯಸ್ ಪೌಲ್ ನಝರೆತ್, ಸಂಜಯ್ ಶಿಂಧೆ, ಬೆನೆ ಡಿಕ್ಟಾ ರೆಬೆಲ್ಲೋ, ಮರಿಟಾ ಡಿ’ಮೆಲ್ಲೋ, ಥೋಮಸ್ ಡಿ.ಲೊಬೋ, ಜೆರಾಲ್ಡ್ ಕಾರ್ಡೊàಜಾ, ನ್ಯಾಯವಾದಿ ಪಿಯುಸ್ ವಾಸ್, ಆ್ಯನ್ಸಿ ಡಿ’ಸೋಜಾ, ಜೋರ್ಜ್ ಕಾಸ್ತೆಲಿನೋ, ರೋನಾಲ್ಡ್ ಎಚ್. ಮೆಂಡೋನ್ಸಾ, ಬ್ಯಾಂಕ್‌ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್.ಡಿ’ಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ನಿರ್ದೇಶಕರಾದ ಜೋನ್ ಡಿ’ಸಿಲ್ವಾ ಮತ್ತು ವಿನ್ಸೆಂಟ್ ಮಥಾಯಸ್ ಸಂದಭೋìಚಿತವಾಗಿ ಮಾತನಾಡಿ ಬ್ಯಾಂಕಿನ ಕಾರ್ಯವೈಖರಿ, ಆಧುನಿಕ ಸೇವೆಗಳನ್ನು ತಿಳಿಸಿ ಅವುಗಳ ಸದುಪಯೋಗ ಪಡೆಯುವಂತೆ ವಿನಂತಿಸಿದರು. ಸಭೆಯಲ್ಲಿ ಬ್ಯಾಂಕ್‌ನ ಶೇರುದಾರರು, ಹಿತೈಷಿಗಳು, ಹೆಚ್ಚುವರಿ ಪ್ರಧಾನ ಪ್ರಬಂಧಕ ಹರೋಲ್ಡ್ ಎಂ.ಸೆರಾವೋ, ಮಾಜಿ ನಿರ್ದೇಶಕರು, ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಶೇರುದಾರರ ಪರವಾಗಿ ಕೆಲವು ಸದಸ್ಯರು ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ದರು. ಬ್ಯಾಂಕ್‌ನ ಸಿಇಒ ವಿಲಿಯಂ ಡಿ’ಸೋಜಾ ಸೂಚನಾ ಪತ್ರಗಳನ್ನು ಹಾಗೂ ಸಭಾ ಕಲಾಪ ಗಳನ್ನು ಭಿತ್ತರಿಸಿದರು. ಗತ ಸಾಲಿನಲ್ಲಿ ಅಗಲಿದ ಬ್ಯಾಂಕ್ ಸದಸ್ಯರು, ಗ್ರಾಹಕರು, ಹಿತೈಷಿಗಳು ಮತ್ತು ರಾಷ್ಟ್ರದ-ಗಣ್ಯರಿಗೆ ಸಭೆಯ ಆದಿಯಲ್ಲಿ ಶ್ರದ್ಧಾಂಜಲಿ ಕೋರ ಲಾಯಿತು. ಎಡ್ವರ್ಡ್ ರಾಸ್ಕಿನ್ಹಾ ಸಭಾ ಕಲಾಪ ನಿರ್ವಹಿಸಿದರು. ವಿಲಿಯಂ ಸಿಕ್ವೇರಾ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್