ಅಚ್ಚರಿಯಾದರೂ ಇದು ಸತ್ಯ. ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ತೈಲ ದರ ಏರಿಕೆಯನ್ನು ಖಂಡಿಸಿ ಹರ್ಯಾಣದ ರೈತರು ಹಾಲನ್ನು ಲೀ.ಗೆ 100 ರೂ.ನಂತೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ.
Advertisement
ಸರ್ಕಾರಿ ಸಹಕಾರಿ ಸೊಸೈಟಿಗಳಿಗೆ ಇನ್ನು ಮುಂದೆ 100 ರೂ.ಗೆ ಹಾಲು ಮಾರಾಟ ಮಾಡುವ ಕುರಿತು ಎಂದು ಖಾಪ್ ಮಹಾ ಪಂಚಾಯತ್‌ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಇದೇ ವೇಳೆ, ಕೃಷಿ ಕಾಯ್ದೆಗಳನ್ನು ಪ್ರಧಾನಿ ಮೋದಿ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಬಜೆಟ್ ನಲ್ಲಿ ನೀಡಲಾದ ಅನುದಾನಗಳ ಪರಿಣಾಮಕಾರಿ ಅನುಷ್ಠಾನ ಎಂಬ ವಿಚಾರದ ವೆಬಿನಾರ್‌ನಲ್ಲಿ ಸೋಮವಾರ ಅವರು ಮಾತನಾಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಖಾಸಗಿಯವರ ಭಾಗೀದಾರಿಕೆ ಹೆಚ್ಚಾಗಬೇಕು. ರೈತರು ಕೃಷಿ ಉತ್ಪನ್ನಗಳನ್ನು ದೇಶದ ಯಾವ ಭಾಗದಲ್ಲಾದರೂ ಮಾರಾಟ ಮಾಡುವ ಆಯ್ಕೆ ಸಿಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಅಲ್ಲದೆ, ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಆಹಾರ ಸಂಸ್ಕರಣೆಯ ಕ್ರಾಂತಿ ತರುವ ಅಗತ್ಯವಿದೆ ಎಂದೂ ಮೋದಿ ಹೇಳಿದ್ದಾರೆ. ಇದನ್ನೂ ಓದಿ :ಜಿ-23ಯಲ್ಲಿ ಗುರುತಿಸಿಕೊಳ್ಳಲ್ಲ: ಮಾಜಿ ಮುಖ್ಯಮಂತ್ರಿ ಮೊಯ್ಲಿ ಸ್ಪಷ್ಟನೆ