Advertisement

Maharashtra ದಲ್ಲಿರುವುದು 100 ಪರ್ಸೆಂಟ್‌ ಸರ್ಕಾರ: ಆದಿತ್ಯ ಠಾಕ್ರೆ

10:00 PM Oct 05, 2023 | Team Udayavani |

ಮುಂಬೈ: “ಕರ್ನಾಟಕದಲ್ಲಿದ್ದ ಬಿಜೆಪಿ ಸರ್ಕಾರ 40 ಪರ್ಸೆಂಟ್‌ ಸರ್ಕಾರವಾದರೆ, ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ-ಶಿವಸೇನಾ-ಎನ್‌ಸಿಪಿ ಮೈತ್ರಿಕೂಟದ ಸರ್ಕಾರವು 100 ಪರ್ಸೆಂಟ್‌ ಸರ್ಕಾರವಾಗಿದೆ’ ಎಂದು ಮಾಜಿ ಸಚಿವ ಆದಿತ್ಯ ಠಾಕ್ರೆ ಕಿಡಿಕಾರಿದ್ದಾರೆ.

Advertisement

ಸಂವಾದವೊಂದರಲ್ಲಿ ಮಾತನಾಡಿದ ಅವರು, “ಮಹಾರಾಷ್ಟ್ರದ ಆಡಳಿತರೂಢ ಸರ್ಕಾರವು ಅಕ್ರಮ ಸರ್ಕಾರವಿದೆ. ಅಸಮರ್ಥ ಸರ್ಕಾರವಾಗಿದೆ. ಸರ್ಕಾರದಲ್ಲಿ ಒಬ್ಬರು ಮುಖ್ಯಮಂತ್ರಿ ಇದ್ದರೆ, ಉಳಿದ ಇಬ್ಬರು “ಅರ್ಧ’ ಉಪಮುಖ್ಯಮಂತ್ರಿಗಳಿದ್ದಾರೆ’ ಎಂದು ದೂರಿದ್ದಾರೆ.

“ಮಹಾರಾಷ್ಟ್ರ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ನಿದ್ದೆಯಲ್ಲಿದೆ. ಇದಕ್ಕೆ ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಾವಿನ ಘಟನೆಯೇ ಸಾಕ್ಷಿé. ರಾಜಕೀಯ ಜಾಹೀರಾತುಗಳಿಗಾಗಿ ಸರ್ಕಾರವು ದೊಡ್ಡ ಮೊತ್ತವನ್ನು ಪೋಲು ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next