Advertisement
ಇನ್ನೊಂದೆಡೆ ಅಧಿಕಾರಿಗಳು ನೀರು ಎಲ್ಲ ಕಡೆಗಳಿಗೂ ತಲುಪುವ ನಿಟ್ಟಿನಲ್ಲಿ ಶತ ಪ್ರಯತ್ನ ಮಾಡುತ್ತಿದ್ದಾರೆ. ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ತಡವಾಗಿ ರೇಷನಿಂಗ್ ಪ್ರಕ್ರಿಯೆ ಆರಂಭಿಸಿದ್ದು ನೀರಿನ ಸಮಸ್ಯೆ ಬಿಗಡಾಯಿಸಲು ಕಾರಣ. ಜಿಲ್ಲಾಡಳಿತ ಕುಡಿಯುವ ನೀರಿಗೆ ಸಂಬಂಧಿಸಿ ದಂತೆ ಆರಂಭ ದಿಂದಲೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳ ಬೇಕಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
Related Articles
ಬುಧವಾರ ತುಂಬೆಯಲ್ಲಿ ನೀರಿನ ಮಟ್ಟ 3.83 ಮೀ. ಇತ್ತು. ರೇಷನಿಂಗ್ ಮಾಡುವುದರಿಂದ ಮುಂದಿನ 10-15 ದಿನಕ್ಕೆ ಈ ನೀರು ಸಾಕಾಗಬಹುದು. ಇನ್ನೊಂದೆಡೆ ಬಿಸಿಲಿಗೆ ನೀರು ಅವಿಯಾಗುವುದೂ ಮುಂದುವರಿದಿದೆ. ನೀರಿನ ಪ್ರಮಾಣ ಇನ್ನಷ್ಟು ಕಡಿಮೆಯಾದರೆ ಸದ್ಯ ಇರುವ ರೇಷನಿಂಗ್ ವ್ಯವಸ್ಥೆಯನ್ನು ಬದಲಾಯಿಸಿ, ಎರಡು ದಿನಕ್ಕೊಮ್ಮೆ ನೀರು ಪೂರೈಸು ಸಾಧ್ಯತೆಯೂ ಇದೆ. ಆದ್ದರಿಂದ ಸಾರ್ವಜನಿಕರು ನೀರಿನ ಬಳಕೆಯಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸುವ ಅಗತ್ಯವಿದೆ. ಸದ್ಯ ಪೂರೈಕೆಯಾಗುತ್ತಿರುವ ನೀರನ್ನು ಮಿತಬಳಸಿಕೊಂಡು, ಅನಗತ್ಯ ವಾಗಿ ನೀರು ಪೋಲು ಆಗದಂತೆ ತಡೆಯುವುದು ಮಾತ್ರ ಸದ್ಯ ಇರುವ ಪರಿಹಾರ.
Advertisement
ನಿರೀಕ್ಷೆ ಹುಟ್ಟಿಸುತ್ತಿದೆ ಮಳೆಈ ನಡುವೆ ಜಿಲ್ಲೆಯ ಗ್ರಾಮೀಣ ಭಾಗಗಳು, ಘಟ್ಟದ ತಪ್ಪಲಿನ ಭಾಗಗಳಲ್ಲಿ ಕೆಲವು ದಿನಗಳಿಂದ ಪ್ರತಿ ದಿನ ಸಂಜೆಯಾಗುತ್ತಿದ್ದಂತೆ ಮಳೆ ಸುರಿಯುತ್ತಿರುವುದು ಸಣ್ಣ ನಿರೀಕ್ಷೆ ಹುಟ್ಟಿಸಿದೆ. ಪುತ್ತೂರು, ಸುಳ್ಯ ಭಾಗದ ಕೆಲವೆಡೆ ಧಾರಾಕಾರವಾಗಿ ಮಳೆಯಾಗಿ, ತೋಡು, ತೊರೆಗಳಲ್ಲಿ ನೀರು ಹರಿದು ಹೋಗುತ್ತಿದೆ. ಮಳೆಯ ಪ್ರಮಾಣ ಹೆಚ್ಚಾಗಿ ನದಿಗಳಲ್ಲಿ ನೀರಿನ ಹರಿಯುವಿಕೆ ಶುರುವಾದರೆ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತಿ ಸಿಗಬಹುದು ಎನ್ನುತ್ತಾರೆ ಅಧಿಕಾರಿಗಳು. ದಿನಕ್ಕೆ 50 ಎಂಎಲ್‌ಡಿ ನೀರು ಲಭ್ಯ
ನಗರದ ಜನರಿಗೆ ಯಾವುದೇ ಅಡ್ಡಿಯಿಲ್ಲದೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಚುನಾವಣೆ ಇದ್ದರೂ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. ಈ ನಡುವೆ ಅಣೆಕಟ್ಟಿನಲ್ಲಿ ನೀರು ಆವಿಯಾಗುವ ಪ್ರಮಾಣವೂ ಹೆಚ್ಚಾಗಿದೆ. ಇನ್ನೊಂದೆಡೆ 13 ಪಂಪ್‌ಗ್ಳನ್ನು ಬಳಸಿ ಅಣೆಕಟ್ಟಿನಲ್ಲಿ ಕೆಳಗಿನ ಭಾಗದಿಂದ ನೀರನ್ನು ಅಣೆಕಟ್ಟಿಗೆ ತುಂಬಿಸಲಾಗುತ್ತಿದ್ದು, ಇದರಿಂದ ಸ್ವಲ್ಪ ಅನುಕೂಲವಾಗಿದೆ. ದಿನಕ್ಕೆ ಸುಮಾರು 50 ಎಂಎಲ್‌ಡಿ ನೀರು ಇದರಿಂದ ಲಭ್ಯವಾಗುತ್ತಿದೆ.
-ಚನ್ನಬಸಪ್ಪ ಕೆ., ಮನಪಾ ಆಯುಕ್ತ