Advertisement

Ayodhya Temple: ರಾಮಮಂದಿರದ 100 ಬಾಗಿಲು ತಯಾರಿಯಲ್ಲಿ ಹೈದರಾಬಾದ್‌ ಟಿಂಬರ್‌ ತಲ್ಲೀನ…

01:31 PM Dec 29, 2023 | Team Udayavani |

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಮೀಪಿಸುತ್ತಿರುವಂತೆಯೇ ಅಯೋಧ್ಯೆಯಲ್ಲಿನ ಚಟುವಟಿಕೆ ಕುರಿತ ಮಾಹಿತಿ ಒಂದೊಂದಾಗಿ ಹೊರಬೀಳುತ್ತಿದೆ. ಹೈದರಾಬಾದ್‌ ನ ಪ್ರಸಿದ್ಧ ಟಿಂಬರ್‌ ಸಂಸ್ಥೆಯೊಂದು ರಾಮ ಮಂದಿರಕ್ಕೆ ಒದಗಿಸಬೇಕಾದ 100 ಬಾಗಿಲುಗಳ ತಯಾರಿಯ ಅಂತಿಮ ಹಂತದಲ್ಲಿರುವುದಾಗಿ ತಿಳಿಸಿದೆ.

Advertisement

ಇದನ್ನೂ ಓದಿ:Fruad: ಫೇಸ್‌ಬುಕ್ ನಲ್ಲಿ ಹುಡುಗಿ ಎಂದು ನಂಬಿಸಿ 7 ಲಕ್ಷ ವಂಚಿಸಿದ ತೀರ್ಥಹಳ್ಳಿಯ ಭೂಪ

ಅನುರಾಧ ಟಿಂಬರ್ಸ್‌ ಇಂಟರ್‌ ನ್ಯಾಷನಲ್‌ ಆಡಳಿತ ಪಾಲುದಾರರಾದ ಚಿ.ಶರತ್‌ ಬಾಬು ಅವರು ಅಯೋಧ್ಯೆ ರಾಮಮಂದಿರಕ್ಕಾಗಿ ನೂರು ಬಾಗಿಲುಗಳನ್ನು ಸಕಾಲಕ್ಕೆ ಒದಗಿಸುವ ನಿಟ್ಟಿನಲ್ಲಿ ಅಯೋಧ್ಯೆ ಮತ್ತು ಹೈದರಾಬಾದ್‌ ನಡುವೆ ಕಳೆದ ಜೂನ್‌ ನಿಂದ ಓಡಾಟ ನಡೆಸುತ್ತಿದ್ದಾರೆ.

ನ್ಯೂಸ್‌ 18 ಜತೆ ಮಾಹಿತಿ ಹಂಚಿಕೊಂಡಿರುವ ಶರತ್‌ ಬಾಬು, ರಾಮಮಂದಿರದ ಬಾಗಿಲುಗಳಿಗಾಗಿ ನಾವು ಸುಮಾರು 3,000 ವರ್ಷಗಳವರೆಗೆ ಬಾಳಿಕೆ ಬರುವ ತೇಗದ ಮರಗಳನ್ನು ಉಪಯೋಗಿಸಿದ್ದೇವೆ. ಅನುಮಾನವೇ ಬೇಡ ನಾವು ಇಂತಹ ಪ್ರಾಜೆಕ್ಟ್‌ ಗಳಿಗೆ ಉತ್ತಮ ಮರಗಳನ್ನೇ ಆಯ್ಕೆ ಮಾಡುತ್ತೇವೆ. ನಮಗೆ ಈ ಗುತ್ತಿಗೆ ಲಭಿಸಿದ ನಂತರ, ಮಹಾರಾಷ್ಟ್ರದ ಬಾಳ್‌ ಹರ್ಷಾ ಅರಣ್ಯದಲ್ಲಿ ತೇಗದ ಮರಗಳನ್ನು ಆಯ್ಕೆ ಮಾಡಿದ್ದೇವು. ಈ ಮರಗಳ ಅಂದಾಜು ವರ್ಷ ನೂರಕ್ಕಿಂತಲೂ ಅಧಿಕ. ಈ ಮರದ ತಿರುಳಿನಲ್ಲಿ ಯಾವುದೇ ಒಡಕಾಗಲಿ, ಟೊಳ್ಳಾಗಲಿ ಇಲ್ಲ. ಅಷ್ಟೇ ಅಲ್ಲ ಬಳಿಕ ಈ ಮರಗಳ ಆಯ್ಕೆಗಾಗಿ ಕಠಿಣ ಪ್ರಕ್ರಿಯೆ ಇದೆ. ತೇಗದ ಮರ ಹವಾಮಾನ ಮತ್ತು ಗೆದ್ದಲು ಸಮಸ್ಯೆಗೆ ಪ್ರತಿರೋಧಕವಾಗಿದೆ.

Advertisement

ಶರತ್‌ ಅವರ ಕುಟುಂಬ ಕಳೆದ ಮೂರು ತಲೆಮಾರುಗಳಿಂದ ಈ ಉದ್ಯಮ ನಡೆಸಿಕೊಂಡು ಬರುತ್ತಿದೆ. ಸುಮಾರು ಮೂರು ವರ್ಷಗಳ ಹಿಂದೆ ಅಯೋಧ್ಯೆ ರಾಮಮಂದಿರ ಟ್ರಸ್ಟ್‌, ಎಲ್‌ & ಟಿ ಮತ್ತು ಟಿಸಿಎಸ್‌ ನಮ್ಮನ್ನು ಸಂಪರ್ಕಿಸಿ, ರಾಮಮಂದಿರದ ಮರದ ಮಾಡೆಲ್‌ ಅನ್ನು ಮಾಡಿಕೊಡುವಂತೆ ತಿಳಿಸಿತ್ತು. ನಾವು ಅದಕ್ಕಾಗಿ ಉತ್ತಮ ಮರಗಳನ್ನು ಬಳಸಿ ಮಾಡೆಲ್‌ ತಯಾರಿಸಿ ಕೊಟ್ಟಿದ್ದೇವು. ಆ ಬಳಿಕ ನಮಗೆ ಬಾಗಿಲುಗಳ ನಿರ್ಮಾಣದ ಕೆಲಸದ ಗುತ್ತಿಗೆ ದೊರಕಿತ್ತು.

ಹೀಗಾಗಿ ಕಳೆದ ಜೂನ್‌ ನಲ್ಲಿ ಅಯೋಧ್ಯೆಯಲ್ಲಿಯೇ ವರ್ಕ್‌ ಶಾಪ್‌ ಮಾಡಿದ್ದು, ಬಹುತೇಕ ಕೆಲಸಗಳು ಪೂರ್ಣಗೊಳ್ಳುತ್ತಾ ಬಂದಿದೆ. ದಾಖಲೆಯ ಅರು ತಿಂಗಳೊಳಗೆ 100 ಬಾಗಿಲುಗಳ ಕಾರ್ಯ ಮುಕ್ತಾಯವಾಗಲಿದೆ. ಅದೇ ರೀತಿ ರಾಮ ಮಂದಿರದ ಮರದ ಮಾದರಿಯನ್ನು ಭಗವಾನ್‌ ಶ್ರೀರಾಮನ ದರ್ಶನ ಪಡೆಯುವ ಮಾರ್ಗದಲ್ಲಿ ಇರಿಸುವ ಮೂಲಕ ನೂತನ ರಾಮಮಂದಿರದ ಚಿತ್ರಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎಂದು ಶರತ್‌ ಬಾಬು ವಿವರಿಸಿದ್ದಾರೆ.

ಕನ್ಯಾಕುಮಾರಿಯ ಕುಶಲ ಕರ್ಮಿಗಳು ಬಾಗಿಲು ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅವರು ಭಾರತದ ಪ್ರಸಿದ್ಧ ದೇವಾಲಯಗಳ ಬಾಗಿಲುಗಳ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲಂಕೃತ ಬಾಗಿಲುಗಳಲ್ಲಿ ಆನೆ, ನವಿಲು ಹಾಗೂ ವಿವಿಧ ದೇವರ ಚಿತ್ರಗಳನ್ನು ಕೆತ್ತಲಾಗಿದೆ. ಗರ್ಭಗುಡಿಯ ಬಾಗಿಲಲ್ಲಿ ನವಿಲಿನ ಚಿತ್ರವಿದೆ. ಇದು ಫೋಲ್ಡ್‌ ಬಾಗಿಲಾಗಿದ್ದು, 8 ಅಡಿ ಎತ್ತರ ಹಾಗೂ 12 ಅಡಿ ಅಗಲವಿದೆ. ಮಂದಿರದ ಆವರಣದಲ್ಲಿ ವಿವಿಧ ಬಗೆಯ ಬಾಗಿಲುಗಳಿವೆ. ಆದರೆ ರಾಮಮಂದಿರದ ಒಳಗಿನ ಎಲ್ಲಾ ಬಾಗಿಲುಗಳು ಚಿನ್ನದ ಲೇಪಿತವಾಗಿದ್ದು, ನೆಲಮಹಡಿಯಲ್ಲಿ 18 ಬಾಗಿಲುಗಳಿವೆ. ಶೀಘ್ರದಲ್ಲೇ ರಾಮಮಂದಿರಕ್ಕೆ ಅಗತ್ಯವಿರುವ ಬಾಗಿಲುಗಳನ್ನು ಸರಬರಾಜು ಮಾಡುತ್ತೇವೆ ಎಂಬುದು ಶರತ್‌ ಬಾಬು ಅವರ ಅಭಿಲಾಷೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next