Advertisement

ಐಸಿಸಿ ಟಿ20 ವಿಶ್ವಕಪ್‌ಗೆ 100 ದಿನ: ಕೌಂಟ್‌ಡೌನ್‌ ಆರಂಭ

11:45 PM Jul 08, 2022 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯ ಆತಿಥ್ಯದಲ್ಲಿ ವರ್ಷಾಂತ್ಯ ನಡೆಯುವ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಇನ್ನು ಉಳಿದಿರುವುದು ಭರ್ತಿ 100 ದಿನ.

Advertisement

ಈ ಸಂದರ್ಭ, ಶುಕ್ರವಾರ ಮೆಲ್ಬರ್ನ್ ನಲ್ಲಿ “ಕೌಂಟ್‌ ಡೌನ್‌’ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಯಿತು. ಜತೆಗೆ ಟಿ20 ವಿಶ್ವಕಪ್‌ ಟ್ರೋಫಿಯ ವಿಶ್ವ ಪರ್ಯಟನೆಗೂ ಚಾಲನೆ ನೀಡಲಾಯಿತು.

ಹಾಲಿ ಟಿ20 ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ತಂಡದ ನಾಯಕ ಆರನ್‌ ಫಿಂಚ್‌, ಶೇನ್‌ ವಾಟ್ಸನ್‌, ವಕಾರ್‌ ಯೂನಿಸ್‌, ಮಾರ್ನೆ ಮಾರ್ಕೆಲ್‌ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ವಿಶ್ವಕಪ್‌ ಟ್ರೋಫಿ 4 ಖಂಡಗಳ, 13 ದೇಶಗಳ ಒಟ್ಟು 35 ಕೇಂದ್ರಗಳಲ್ಲಿ ಪ್ರದರ್ಶಿಸಲ್ಪಡಲಿದೆ. ಫಿಜಿ, ಫಿನ್ಲಂಡ್‌, ಜರ್ಮನಿ, ಘಾನಾ, ಇಂಡೋನೇಷ್ಯಾ, ಜಪಾನ್ , ನಮೀಬಿಯಾ, ನೇಪಾಲ, ಸಿಂಗಾಪುರದಲ್ಲೂ ಈ ಟ್ರೋಫಿ ಸಂಚರಿಸಲಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next