Advertisement

ಪುನೀತ್‌ ಜಾಕಿಗೆ ದಶಕದ ಸಂಭ್ರಮ

01:48 PM Oct 12, 2020 | Suhan S |

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ ಸೂಪರ್‌ ಹಿಟ್‌ ಚಿತ್ರಗಳ ಪೈಕಿ “ಜಾಕಿ’ ಚಿತ್ರ ಕೂಡ ಒಂದು. ಇಂದಿಗೂ ಅದೆಷ್ಟೋ ಅಭಿಮಾನಿಗಳ ಬಾಯಲ್ಲಿ ಹಾಡಾಗಿ ಗುನುಗುಡುವ “ಜಾಕಿ’ ಚಿತ್ರ ಬಿಡುಗಡೆಯಾಗಿ ಇದೇ ಅ. 14ಕ್ಕೆ ಬರೋಬ್ಬರಿ ಹತ್ತು ವರ್ಷ.

Advertisement

ಹೌದು, 2010ರ ಅ. 14ರಂದು ತೆರೆಕಂಡ “ಜಾಕಿ’ ಚಿತ್ರಕ್ಕೆ ಈಗ ದಶಕದ ಸಂಭ್ರಮ. ಪುನೀತ್‌ ರಾಜಕುಮಾರ್‌ ಅವರ ಸಿನಿಮಾ ಕೆರಿಯರ್‌ನ ವಿಭಿನ್ನ ಸಿನಿಮಾಗಳಲ್ಲಿ ಒಂದು ಎಂದು ಇಂದಿಗೂ ಹೇಳಲಾಗುವ “ಜಾಕಿ’ ಸಿನಿಪ್ರಿಯರಿಗೆ ಭರಪೂರ ಮನರಂಜನೆ ಕೊಡುವುದರ ಜೊತೆಗೆ ಬಾಕ್ಸಾಫೀಸ್‌ ನಲ್ಲೂ ದೊಡ್ಡ ಮಟ್ಟದಕಮಾಲ್‌ ಮಾಡಿತ್ತು. ಇದೇ ಅ.14ಕ್ಕೆ “ಜಾಕಿ’ ಚಿತ್ರ ತೆರೆಕಂಡು ದಶಕದ ಹೊತ್ತಿನಲ್ಲಿರುವಾಗ, ಈ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿಮಾನಿಗಳು ತೆರೆಮರೆಯಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ.

ಸದ್ಯ ಕೋವಿಡ್ ಆತಂಕವಿರುವುದರಿಂದ, ಸೋಶಿಯಲ್‌ ಮೀಡಿಯಾವೇದಿಕೆಗಳಲ್ಲೇ”ಜಾಕಿ’ಯ ದಶಕದ ಸಂಭ್ರಮವನ್ನುಆಚರಿಸಲು ಅಪ್ಪು ಫ್ಯಾನ್ಸ್‌ ನಿರ್ಧರಿಸಿದ್ದಾರೆ. “ಜಾಕಿ’ ತೆರೆಕಂಡು ಹತ್ತು ವರ್ಷಗಳಾಗುತ್ತಿರುವ ಸಂದರ್ಭದಲ್ಲಿ, ಪುನೀತ್‌ ಅಭಿಮಾನಿಗಳು ಸ್ಪೆಷಲ್‌ ಕಾಮನ್‌ ಡಿ.ಪಿ (ಸಿಡಿಪಿ)ಯನ್ನು ವಿನ್ಯಾಸಗೊಳಿಸಿದ್ದು, ಅದನ್ನು ಅಕ್ಟೋಬರ್‌ 13 ರಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

“ಜಾಕಿ’ ಚಿತ್ರಕ್ಕೆ ದುನಿಯಾ ಸೂರಿ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದರು. ಅ.14ರಿಂದ ಜೇಮ್ಸ್‌ ಶೂಟಿಂಗ್‌: ಸದ್ಯ ಪುನೀತ್‌ ರಾಜ್‌ಕುಮಾರ್‌ ಅವರ “ಯುವರತ್ನ’ದ ಹಾಡಿನ ಚಿತ್ರೀಕರಣದಲ್ಲಿ ಬಿಝಿಯಾಗಿದ್ದು, ಅದು ಈ ವಾರಕ್ಕೆ ಮುಗಿಯಲಿದೆ. ಅದನ್ನು ಮುಗಿಸಿಕೊಂಡು “ಜೇಮ್ಸ್‌’ ತಂಡ ಸೇರಲಿದ್ದಾರೆ. ಚಿತ್ರೀಕರಣ ಹೊಸಪೇಟೆಯಲ್ಲಿ ನಡೆಯಲಿದ್ದು, ಹೈವೋ ಲ್ಟೇಜ್ ಆ್ಯಕ್ಷನ್‌ ದೃಶ್ಯವನ್ನು ಇಲ್ಲಿ ಚಿತ್ರೀಕರಿಸಿ ಕೊಳ್ಳಲಾಗುತ್ತದೆ.

 

Advertisement

ಶಿವಣ್ಣ: ವೀಕೆಂಡ್‌ ವಿತ್‌ ಫ್ರೆಂಡ್ಸ್‌ : ನಟ ಶಿವರಾಜ್‌ಕುಮಾರ್‌ ತಮ್ಮ ಫ್ಯಾಮಿಲಿಗೆ ಎಷ್ಟು ಮಹತ್ವ ಕೊಡುತ್ತಾರೋ ಅದೇ ರೀತಿ ಫ್ರೆಂಡ್ಸ್‌ಗೂ ಅಷ್ಟೇ ಮಹತ್ವಕೊಡುತ್ತಾರೆ. ಅದೇ ಕಾರಣದಿಂದ ಶಿವಣ್ಣ ಎಲ್ಲಿರುತ್ತಾರೋ ಅಲ್ಲಿ ಅವರ ಆಪ್ತ ವಲಯ ಇರುತ್ತದೆ. ಹೀಗಿರುವ ಶಿವಣ್ಣ ಈ ಬಾರಿಯ ವೀಕೆಂಡ್‌ ಅನ್ನು ತಮ್ಮ ಫ್ರೆಂಡ್ಸ್‌ ಜೊತೆ ಕಳೆದಿದ್ದಾರೆ. ಅದು ಜಾಲಿ ಟ್ರಿಪ್‌ ಮೂಲಕ.

ಹೌದು, ಶಿವರಾಜ್‌ಕುಮಾರ್‌ ಶನಿವಾರ ತಮ್ಮ ಆಪ್ತ ಸ್ನೇಹಿತರ ಜೊತೆ ಮೇಕೆದಾಟು, ಸಂಗಮ, ಮುತ್ತತ್ತಿ ಅರಣ್ಯ ಸುತ್ತಿ, ಟ್ರಾಕ್ಟರ್‌ ಓಡಿಸಿ ರಿಲ್ಯಾಕ್ಸ್‌ ಆಗಿದ್ದಾರೆ. ನಿರ್ಮಾಪಕಕೆ.ಪಿ.ಶ್ರೀಕಾಂತ್‌ ಸೇರಿದಂತೆಕೆಲವೇಕೆಲವು ಅವರ ಆಪ್ತ ವರ್ಗ ಈ ಟ್ರಿಪ್‌ನಲ್ಲಿದೆ. ಲಾಕ್‌ ಡೌನ್‌ನಿಂದ ಎಲ್ಲೂಹೋಗದೇ ಮನೆಯಲ್ಲೇ ಇದ್ದ ಶಿವಣ್ಣ, ತಮ್ಮ ಪಾಲಿನ “ಭಜರಂಗಿ-2′ ಚಿತ್ರೀಕರಣ ಮುಗಿಸಿದ್ದಾರೆ. ಈಗ ಹೊಸ ಚಿತ್ರಕ್ಕೆ ಅವರು ಅಣಿಯಾಗುತ್ತಿದ್ದು, ಅದಕ್ಕಿಂತಮುಂಚೆ ರಿಲ್ಯಾಕ್ಸ್‌ ಆಗಲು ತಮ್ಮ ಸ್ನೇಹಿತರ ಜೊತೆ ಟ್ರಿಪ್‌ ಹೋಗಿದ್ದಾರೆ. ಇನ್ನು ಅವರ “ಭಜರಂಗಿ-2′ ಚಿತ್ರದ ಚಿತ್ರೀಕರಣ ಮುಗಿದಿದ್ದು, ಗ್ರಾಫಿಕ್‌ವರ್ಕ್‌ ಸೇರಿದಂತೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿದೆ. ಈಗಾಗಲೇ ಅವರ ಹೊಸಚಿತ್ರ “ಆರ್‌ಡಿಎಕ್ಸ್‌’ಗೆ ಮುಹೂರ್ತವಾಗಿದ್ದು, ಆ ಚಿತ್ರದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next