Advertisement

ಟಿ20 ವಿಶ್ವಕಪ್‌ ಅರ್ಹತಾ ಸುತ್ತಿನ ಮೊದಲ ಪಂದ್ಯ: ಒಮಾನ್‌ಗೆ 10 ವಿಕೆಟ್‌ ಭರ್ಜರಿ ಗೆಲುವು

10:17 PM Oct 17, 2021 | Team Udayavani |

ಅಲ್‌ ಅಮಿರಾಟ್‌ (ಒಮಾನ್‌): ಟಿ20 ವಿಶ್ವಕಪ್‌ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಪಪುವಾ ನ್ಯೂ ಗಿನಿ (ಪಿಎನ್‌ಜಿ) ವಿರುದ್ಧ ಆತಿಥೇಯ ಒಮಾನ್‌ 10 ವಿಕೆಟ್‌ಗಳ ಗೆಲುವು ಸಾಧಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಪಿಎನ್‌ಜಿ 9 ವಿಕೆಟಿಗೆ 129 ರನ್‌ ಗಳಿಸಿದರೆ, ಒಮಾನ್‌ 13.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 131 ರನ್‌ ಪೇರಿಸಿತು. ಲುಧಿಯಾನ ಮೂಲದ ಆರಂಭಕಾರ ಜತೀಂದರ್‌ ಸಿಂಗ್‌ 42 ಎಸೆತಗಳಿಂದ ಅಜೇಯ 73 ರನ್‌ ಸಿಡಿಸಿದರು (7 ಬೌಂಡರಿ, 4 ಸಿಕ್ಸರ್‌). ಮತ್ತೋರ್ವ ಓಪನರ್‌ ಅಕಿಬ್‌ ಇಲ್ಯಾಸ್‌ 50 ರನ್‌ ಹೊಡೆದು ಔಟಾಗದೆ ಉಳಿದರು (43 ಎಸೆತ, 5 ಬೌಂಡರಿ, 1 ಸಿಕ್ಸರ್‌).

ಒಮಾನ್‌ ಬೌಲಿಂಗ್‌ ಸರದಿಯಲ್ಲಿ ನಾಯಕ ಜೀಶನ್‌ ಮಕ್ಸೂದ್‌ 20 ರನ್ನಿತ್ತು 4 ವಿಕೆಟ್‌ ಉರುಳಿಸಿದರು. ಬಿಲಾಲ್‌ ಖಾನ್‌ ಮತ್ತು ಖಲೀಮುಲ್ಲ ತಲಾ 2 ವಿಕೆಟ್‌ ಕಿತ್ತರು. ಪಿಎನ್‌ಜಿ ಆರಂಭಿಕರಿಬ್ಬರನ್ನೂ ಶೂನ್ಯಕ್ಕೆ ಕಳೆದುಕೊಂಡಿತು. ನಾಯಕ ಅಸದ್‌ ವಾಲಾ 56, ಚಾರ್ಲ್ಸ್‌ ಅಮಿನಿ 37 ರನ್‌ ಪೇರಿಸಿ ಸಣ್ಣದೊಂದು ಹೋರಾಟ ಸಂಘಟಿಸಿದರು.

ಇದನ್ನೂ ಓದಿ:ಚೆನ್ನೈಯಲ್ಲೇ ಉಳಿಯಲಿದ್ದಾರೆ ಮಹೇಂದ್ರ ಸಿಂಗ್‌ ಧೋನಿ

Advertisement

Udayavani is now on Telegram. Click here to join our channel and stay updated with the latest news.

Next