Advertisement

ಪ್ರಸಕ್ತ ವರ್ಷ ಅಮೆರಿಕದಲ್ಲಿ 10 ಶೂಟೌಟ್‌! ಶಸ್ತ್ರಾಸ್ತ್ರ ಕಾಯ್ದೆ ಮತ್ತೆ ಚರ್ಚೆಗೆ

10:36 AM May 26, 2022 | Team Udayavani |

ವಾಷಿಂಗ್ಟನ್‌: ಟೆಕ್ಸಾಸ್‌ನ ರಾಬ್‌ ಎಲಿಮೆಂಟರಿ ಶಾಲೆಯಲ್ಲಿ ಬುಧವಾರ ನಡೆದಿರುವ ಶೂಟೌಟ್‌ ಪ್ರಕರಣ ಅಮೆರಿಕವನ್ನು ಮಾತ್ರವಲ್ಲ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಇದೇ ವರ್ಷದಲ್ಲಿ ಅಮೆರಿಕದಲ್ಲಿ ಸಂಭವಿಸಿರುವ 10ನೇ ಶೂಟೌಟ್‌ ಪ್ರಕರಣ ಇದಾಗಿದ್ದು, ಅಲ್ಲಿ ಅನಿಯಂತ್ರಿತವಾಗಿ ಬೆಳೆದಿರುವ ಶಸ್ತ್ರಾಸ್ತ್ರ ಸ್ವಾತಂತ್ರ್ಯ ಕಾನೂನು ಈಗ ಮತ್ತೆ ಚರ್ಚೆಗೆ ಬಂದಿದೆ. ಹಲವು ಮುಗ್ಧ ಮಕ್ಕಳನ್ನು ಕೊಂದ ಕೊಲೆಗಾರ ಸಾಲ್ವಡಾರ್‌ ರಮೊಸ್‌(18)ನಂಥ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಹಂತಕ ರನ್ನು ನಿಯಂತ್ರಿಸಲು ಎಲ್ಲೆಡೆ ಯಿಂದ ಕೂಗು ಕೇಳಿಬರುತ್ತಿದೆ.

Advertisement

ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕದ ಅಧ್ಯಕ್ಷ ಜೊ ಬೈಡನ್‌, ಅಮೆರಿಕ ಶಸ್ತ್ರಾಸ್ತ್ರ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಅನಿವಾರ್ಯತೆ ಬಂದೊದಗಿದೆ. ಈವರೆಗೆ ಅದೆಷ್ಟೋ ಬಾರಿ ಕಾಯ್ದೆಯ ತಿದ್ದುಪಡಿ ಮಾಡಲು ಮುಂದಾದಾಗಲೆಲ್ಲ ಕಾಯ್ದೆಯ ಪರವಾಗಿ ಕೆಲವು ರಾಜಕಾರಣಿಗಳು ಮಾಡುತ್ತಿದ್ದ ಲಾಬಿಯಿಂದಾಗಿ ಅದು ಕಾರ್ಯಗತವಾಗಿರಲಿಲ್ಲ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲೇಬೇಕಿದೆ ಎಂದು ಹೇಳಿದ್ದಾರೆ.

ಎರಡು ರೈಫ‌ಲ್‌ಗ‌ಳ ಖರೀದಿ: ಹಂತಕ‌ ರಮೊಸ್‌, ಕಳೆದ ವಾರವಷ್ಟೇ ತನ್ನ 18ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದ. ಆ ಬಳಿಕ ಎರಡು ಎ.ಆರ್‌. -15 ರೈಫ‌ಲ್‌ಗ‌ಳನ್ನು ಹಾಗೂ ಅವುಗಳಿಗೆ ಬೇಕಾದ ಸುಮಾರು 350 ಬುಲೆಟ್‌ಗಳನ್ನು 4 ಸಾವಿರ ಡಾಲರ್‌ಗಳನ್ನು ಕೊಟ್ಟು ಕಾನೂನಾತ್ಮಕವಾಗಿಯೇ ಖರೀದಿಸಿದ್ದ.

ಮಕ್ಕಳನ್ನು ಕೊಲ್ಲುವ ದಿನದಂದು ಆತ ಮನೆಯಲ್ಲಿ ತನ್ನ ಅಜ್ಜಿಯ ಜತೆಗೆ ಜಗಳವಾಡಿ, ಆಕೆಯನ್ನು ಶೂಟ್‌ ಮಾಡಿ ಸಿಟ್ಟಿನಿಂದ ಅಲ್ಲಿಂದ ಹೊರಟು ಹೋಗಿದ್ದಾನೆ. ಕೋಪದ ಭರದಲ್ಲಿ ತನ್ನ ಜೀಪನ್ನು ಚಲಾಯಿಸುತ್ತಿದ್ದ ಆತ, ಎಲಿಮೆಂಟರಿ ಶಾಲೆಯ ಬಳಿ ಬಂದ ಕೂಡಲೇ ನಿಯಂತ್ರಣ ತಪ್ಪಿ ಆತನ ಜೀಪು ಅಪಘಾತಕ್ಕೀಡಾಗಿದೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಆತ ಪಕ್ಕದಲ್ಲೇ ಇದ್ದ ಶಾಲೆಯೊಳಗೆ ನುಗ್ಗಿ ಶೂಟೌಟ್‌ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ, ಆತನ ಗುಂಡೇಟಿನಿಂದ ಗಾಯ ಗೊಂಡಿದ್ದ ಅಜ್ಜಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಅಮೆರಿಕ ಕಂಡ ಬರ್ಬರ
ಶೂಟೌಟ್‌ಗಳ ಪಟ್ಟಿ
2022ರ ಮೇ 25: 18 ವರ್ಷದ ಗನ್‌ಮ್ಯಾನ್‌ ದಾಳಿ – 19 ಮಕ್ಕಳು ಸೇರಿ 21 ಸಾವು
2018ರ ಮೇ: ಹೋಸ್ಟನ್‌ನ ಪ್ರೌಢಶಾಲೆಯಲ್ಲಿ 17 ವರ್ಷದ ಗನ್‌ಮ್ಯಾನ್‌ನಿಂದ ದಾಳಿ – 10 ಮಕ್ಕಳ ಸಾವು
2018ರ ಫೆಬ್ರವರಿ: ಫ್ಲೋರಿಡಾದ ಮಾರ್ಜರಿ ಸ್ಟೋನ್‌ಮನ್‌ ಡೌಗ್ಲಸ್‌ ಪ್ರೌಢಶಾಲೆ – 20 ವರ್ಷದ ಯುವಕನಿಂದ ಗುಂಡಿನ ದಾಳಿ – 14 ಮಕ್ಕಳು ಸೇರಿ 17 ಮಂದಿ ಮೃತ
2015ರ ಅಕ್ಟೋಬರ್‌: ಒರಿಜಿನ್‌ನ ರೋಸ್‌ಬರ್ಗ್‌ ಶಾಲೆಯಲ್ಲಿ 9 ಮಂದಿ ಸಾವು, ಬಳಿಕ ಗುಂಡು
ಹಾರಿಸಿದವನು ಆತ್ಮಹತ್ಯೆ
2012ರ ಡಿಸೆಂಬರ್‌: ಕನೆಕ್ಟಿಕಟ್‌ನ ನ್ಯೂಟೌನ್‌ನಲ್ಲಿ 19 ವರ್ಷದ ಯುವಕನಿಂದ ಮೊದಲಿಗೆ ತಾಯಿ ಹತ್ಯೆ, ಬಳಿಕ ಸ್ಯಾಂಡಿ ಹೂಕ್‌ ಎಲಿಮೆಂಟರಿ ಶಾಲೆಗೆ ನುಗ್ಗಿ 20 ಮಕ್ಕಳು, ಆರು ಶಿಕ್ಷಕರ ಹತ್ಯೆ, ಬಳಿಕ ಆತ್ಮಹತ್ಯೆ
2017ರ ಎಪ್ರಿಲ್‌: 23 ವರ್ಷದ ವಿದ್ಯಾರ್ಥಿಯಿಂದ ವರ್ಜೀನಿಯಾದ ಬ್ಲಾಕ್ಸ್‌ಬರ್ಗ್‌ನಲ್ಲಿ ಕಾಲೇಜೊಂದರ ಕ್ಯಾಂಪಸ್‌ಗೆ ನುಗ್ಗಿ 32 ಮಂದಿ ಹತ್ಯೆ. ಆತನೂ ಆತ್ಮಹತ್ಯೆ.

Advertisement

ಅವಮಾನ, ತಲ್ಲಣಗಳ ದುಷ್ಪರಿಣಾಮ
ಮತ್ತೂಂದೆಡೆ ಹಂತಕನ ಮನಃಸ್ಥಿತಿಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಹಂತಕನ ಮೇಲುªಟಿಯು ಆತ ಹುಟ್ಟಿದಾಗಿನಿಂದ ಉಬ್ಬಿಕೊಂಡಿದ್ದು, ಆತ ಶಾಲೆಗೆ ಸೇರಿದಾಗ ಆತನ ಸಹಪಾಠಿಗಳೆಲ್ಲರೂ ಆತನನ್ನು ರೇಗಿಸುತ್ತಿದ್ದುದರಿಂದ ಬಾಲ್ಯದಿಂದಲೇ ಆತ ತೀವ್ರವಾಗಿ ಮನನೊಂದಿದ್ದ. ಇದರಿಂದಾಗಿ, ಆತ ಜೀವನದ ಮೇಲೆ ಜುಗುಪ್ಸೆಯನ್ನು ಹೊಂದಿದ್ದ, ಜತೆಗೆ ಸುತ್ತಲಿನ ಸಮಾಜದ ಬಗ್ಗೆ ತೀರಾ ಕೋಪ ಹಾಗೂ ದ್ವೇಷದ ಮನೋಭಾವವನ್ನು ಬೆಳೆಸಿಕೊಂಡಿದ್ದ ಎಂದು ಹೇಳಲಾಗಿದೆ. ಆತನ ತಾಯಿ ಮಾದಕ ವಸ್ತುಗಳ ವ್ಯಸನಿಯಾಗಿದ್ದು, ಆತನಿಗೆ ತಾಯಿಯ ಆತ್ಮೀಯತೆಯೂ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಇದೆಲ್ಲವೂ ಆತನ ಈ ಕುಕೃತ್ಯಕ್ಕೆ ಕಾರಣ ಎನ್ನಲಾಗಿದೆ.

ಹೆಚ್ಚಾಗಿರುವ ಶೂಟೌಟ್‌
ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಶೂಟೌಟ್‌ಗಳು ಹೆಚ್ಚಾಗಿದ್ದು, ಶಾಲೆಗಳು ಮತ್ತು ಅಲ್ಪಸಂಖ್ಯಾಕರು ಹೆಚ್ಚಿರುವ ಸ್ಥಳಗಳೇ ಹೆಚ್ಚು ಗುರಿಯಾಗುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ, ಇತ್ತೀಚೆಗಷ್ಟೇ ಮೇ 14ರಂದು ಗನ್‌ ಮ್ಯಾನ್‌ವೊಬ್ಬ ಬಫೆಲೋದ ಸೂಪರ್‌ಮಾರ್ಕೆಟ್‌ಗೆ ನುಗ್ಗಿ 10ಕ್ಕೂ ಹೆಚ್ಚು ಕಪ್ಪು ವರ್ಣೀಯ ಜನರನ್ನು ಹತ್ಯೆ ಮಾಡಿದ್ದ. ಹಾಗೆಯೇ ಕಳೆದ 15 ದಿನಗಳಲ್ಲಿ ನಡೆಯುತ್ತಿರುವ 3ನೇ ಶೂಟ್‌ಔಟ್‌ ಇದು. ಇತ್ತೀಚೆಗಷ್ಟೇ, ಬಫೆಲೊ ಹಾಗೂ ಶಿಕಾಗೋ ನಗರಗಳಲ್ಲಿ ಶೂಟೌಟ್‌ಗಳು ನಡೆದಿದ್ದವು. ಜತೆಗೆ ಹಿಂದಿನಿಂದಲೂ ಅಮೆರಿಕದಲ್ಲಿ ಶಾಲೆಗಳೇ ಸಾಫ್ಟ್ ಟಾರ್ಗೆಟ್‌ ಆಗಿ ಬದಲಾಗಿವೆ.

 

Advertisement

Udayavani is now on Telegram. Click here to join our channel and stay updated with the latest news.

Next