Advertisement
ದುಬಾರಿ ಬೆಲೆಯ ಐಫೋನ್, ಸ್ಮಾರ್ಟ್ ಫೋನ್‌ಗಳೇ ಕಳ್ಳರ ಟಾರ್ಗೆಟ್ ಆಗುತ್ತಿವೆ. ಕಿಸೆಗಿಂತ ದೊಡ್ಡ ಗ್ರಾತ್ರದ ಮೊಬೈಲ್‌ಗಳನ್ನು ಎಗರಿಸುವುದು ಕೂಡ ಸುಲಭವಾಗಿರುವುದೇ ಕಳವು ಹೆಚ್ಚಾಗಲು ಒಂದು ಕಾರಣ. ಸುರತ್ಕಲ್ ಠಾಣೆಯಲ್ಲಿ ಮೊಬೈಲ್ ಕಳೆದುಕೊಂಡ ದೂರಿನ ಸಂಖ್ಯೆಯೂ ಏರುತ್ತಿದೆ. ಒಂದೆರಡು ಮೊಬೈಲ್‌ಗಳಾದರೆ ಸೈಬರ್ ಕ್ರೈಂ ಮೂಲಕ ಪತ್ತೆ ಹಚ್ಚಬಹುದಾದರೂ, ನೂರಾರು ದೂರು ದಾಖಲಾಗುತ್ತಿರುವುದರಿಂದ ಪತ್ತೆಹಚ್ಚುವುದು ಕಷ್ಟ ಎನ್ನುತ್ತಾರೆ ಪೊಲೀಸರು.
ಈ ಹಿಂದೆ ಬುಧವಾರ ಮಾತ್ರ ಸಂತೆ ನಡೆಯುತ್ತಿದ್ದು, ಬೇಡಿಕೆ ಹೆಚ್ಚಾದ ಕಾರಣ ಈಗ ರವಿವಾರವೂ ಸಂತೆಯಿದೆ. ಬೆಳಗ್ಗೆ 8ರಿಂದ ಆರಂಭವಾಗುವ ಸಂತೆ ರಾತ್ರಿ 8 ಗಂಟೆಯವರೆಗೆ ಇರುವುದರಿಂದ ಬೆಳಕಿನ ವ್ಯವಸ್ಥೆ ಅಗತ್ಯವಾಗಿದೆ. ವ್ಯವಹಾರಸ್ಥರು ಸೋಲಾರ್ ಲೈಟ್ ಬಳಸಿ ವ್ಯಾಪಾರ ಮಾಡುತ್ತಾರೆ. ಬರುವ ಗ್ರಾಹಕರು ಜನ ಸಂದಣಿ ನಡುವೆ ಕತ್ತಲೆಯಲ್ಲಿ ನಿಂತೇ ಖರೀದಿ ನಡೆಸುತ್ತಿರುವುದು ಕಳ್ಳರಿಗೆ ವರದಾನವಾಗಿದೆ. ಒಂದೆರಡು ಬಾರಿ ಪೊಲೀಸರ ವಾಹನ ಸುತ್ತಾಡಿದರೂ ಕಳ್ಳರ ಮೇಲೆ ಪರಿಣಾಮ ಬೀರಿಲ್ಲ. ಸಂತೆಗೆ ಬರುವಾಗ ದುಬಾರಿ ಮೊಬೈಲ್ ತಾರದಿರುವುದೇ ಒಳಿತು. ಮೊಬೈಲ್ ಕಳಕೊಂಡ ಬಳಿಕ ಪರದಾಡು ವುದರಿಂದ ಮೊದಲೇ ಒಂದಿಷ್ಟು ಜಾಗರೂಕರಾಗಿರುವುದು ಅಗತ್ಯ ಎಂಬ ಸಲಹೆ ಪೊಲೀಸರಿಂದಲೂ ಕೇಳಿ ಬರುತ್ತಿದೆ.