ಕೌಲಾಲಂಪುರ: ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದು 10 ಮಂದಿ ಮೃತಪಟ್ಟಿರುವ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ.
ರಾಯಲ್ ಮಲೇಷಿಯನ್ ನೌಕಾಪಡೆಯ ಪರೇಡ್‌ನ ಪೂರ್ವಾಭ್ಯಾಸದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಮಲೇಷ್ಯಾ ನೌಕಾಪಡೆ ತಿಳಿಸಿದೆ, ಮೃತರೆಲ್ಲರೂ ನೌಕಾಪಡೆಯ ಸಿಬ್ಬಂದಿಗಳು ಎಂದು ಹೇಳಲಾಗಿದೆ. ಘಟನೆಯ ಭಯಾನಕ ದೃಶ್ಯ ಸೆರೆಯಾಗಿದೆ.
ಮಂಗಳವಾರ ಬೆಳಗ್ಗೆ 9.30ಕ್ಕೆ ಪೆರಾಕ್‌ನ ಲುಮುಟ್ ನೇವಲ್ ಬೇಸ್‌ನಲ್ಲಿ ಅಪಘಾತ ಸಂಭವಿಸಿದೆ. ಎಲ್ಲಾ ಮೃತದೇಹಗಳನ್ನು ಲುಮುಟ್ ಆರ್ಮಿ ಬೇಸ್‌ನಲ್ಲಿರುವ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಲಿಕಾಪ್ಟರ್ ಡಿಕ್ಕಿಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಲೇಷಿಯನ್ ಫ್ರೀ ಪ್ರೆಸ್ ವರದಿಯ ಪ್ರಕಾರ, ನೌಕಾಪಡೆಯ 90 ನೇ ವಾರ್ಷಿಕೋತ್ಸವದ ಪರೇಡ್‌ಗೆ ಪೂರ್ವಾಭ್ಯಾಸ ನಡೆಯುತ್ತಿತ್ತು ಈ ವೇಳೆ ಹೆಲಿಕಾಪ್ಟರ್ ಫೆನೆಕ್ ಹೆಲಿಕಾಪ್ಟರ್‌ನ ರೋಟರ್‌ಗೆ ಡಿಕ್ಕಿ ಹೊಡೆದಿದೆ. ಇದಾದ ನಂತರ ಎರಡೂ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.
ಘಟನೆ ಸಂಬಂಧ ಸಂಪೂರ್ಣ ತನಿಖೆ ನಡೆಸಲಾಗುವುದೆಂದು ಮಲೇಷ್ಯಾ ನೌಕಾಪಡೆ ಹೇಳಿಕೊಂಡಿದೆ.