Advertisement

ವರ್ಷದಲ್ಲಿ 10 ಲಕ್ಷ ಮನೆ; ಗ್ರಾಮೀಣ ಪ್ರದೇಶದಲ್ಲೇ 5 ಲಕ್ಷ ನಿರ್ಮಾಣ ಗುರಿ

12:33 AM Apr 27, 2022 | Team Udayavani |

ಬೆಂಗಳೂರು: ಚುನಾವಣೆ ಮುಂದಾಲೋಚನೆ ಇರಿಸಿಕೊಂಡು ರಾಜ್ಯ ಸರಕಾರ ವಸತಿ ಯೋಜನೆಗಳ ಧಮಾಕಾ ಆರಂಭಿಸಿದೆ.

Advertisement

ವಸತಿ ಮತ್ತು ನಿವೇಶನ ರಹಿತರಿಗೆ ಬಸವ, ಅಂಬೇಡ್ಕರ್‌, ವಾಜಪೇಯಿ ವಸತಿ ಯೋಜನೆಗಳಡಿ ಮನೆ ನಿರ್ಮಿಸಿಕೊಡಲು ಸರಕಾರ ಮುಂದಾಗಿದೆ.

2022-23ನೇ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಆಶ್ರಯ ಯೋಜನೆಗಳಡಿ ಗ್ರಾಮೀಣ ಭಾಗದಲ್ಲಿ ಸುಮಾರು 5 ಲಕ್ಷಗಳ ಮನೆ ನಿರ್ಮಾಣ, ನಗರ ಪ್ರದೇಶದಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ನಿರ್ಮಾಣ ಹಾಗೂ ಕೇಂದ್ರ ಸರಕಾರ ದಿಂದ 1.4 ಲಕ್ಷ ಮನೆ, ಸ್ಲಂ ಬೋರ್ಡ್‌ನಡಿ ಒಂದು ಲಕ್ಷ ಮನೆಗಳ ಜತೆಗೆ ಕೇಂದ್ರದ ವತಿಯಿಂದ ಕನಿಷ್ಠ ಇನ್ನೂ 3 ಲಕ್ಷ ಮನೆಗಳನ್ನು ಇದೇ ಆರ್ಥಿಕ ವರ್ಷದಲ್ಲಿ ನಿರ್ಮಿಸಿ ಫ‌ಲಾನುಭವಿಗಳಿಗೆ ಹಂಚಿಕೆ ಮಾಡಲು ರಾಜ್ಯ ಸರಕಾರ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ.

ಒಂದೇ ವರ್ಷ ಗ್ರಾಮೀಣ ಪ್ರದೇಶದಲ್ಲಿ 5 ಲಕ್ಷ ಮನೆಗಳನ್ನು ಫ‌ಲಾನುಭವಿಗಳಿಗೆ ನೀಡಲು ತೀರ್ಮಾನಿಸಿದ್ದು ಇದೇ ಮೊದಲು. ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವುದರಿಂದ ಸರಕಾರದ ಈ ನಡೆ ರಾಜಕೀಯವಾಗಿಯೂ ಮಹತ್ವ ಪಡೆದಿದೆ. 2023ರಲ್ಲಿ ಇನ್ನೊಂದು ಬಜೆಟ್‌ ಮಂಡನೆಗೆ ಅವಕಾಶವಿದೆ, ಆದರೆ ಚುನಾವಣೆಯ ವರ್ಷವಾಗಿರುವುದರಿಂದ ಬಜೆಟ್‌ನಲ್ಲಿ ಘೋಷಿಸಿದರೂ ಚುನಾವಣೆಗೆ ಮುನ್ನ ಫ‌ಲಾನುಭವಿಗಳ ಆಯ್ಕೆಗೆ ಅವಕಾಶ ದೊರೆಯದು. ಹೀಗಾಗಿ ಸರಕಾರ ಈಗಲೇ ಕಾರ್ಯಪ್ರವೃತ್ತವಾಗಿದೆ.

ಫ‌ಲಾನುಭವಿಗಳ ಆಯ್ಕೆ ಕಸರತ್ತು
ಈಗಾಗಲೇ ಪ್ರತೀ ಪಂಚಾಯತ್‌ಗೂ ಮನೆ ಹಂಚಿಕೆ ಮಾಡಲಾಗಿದ್ದು, ಎ. 30ರೊಳಗೆ ಫ‌ಲಾನುಭವಿಗಳನ್ನು ಆಯ್ಕೆ ಮಾಡಿ ರಾಜೀವ್‌ ಗಾಂಧಿ ನಿಗಮಕ್ಕೆ ಪಟ್ಟಿ ಸಲ್ಲಿಸಲು ಸೂಚನೆ ನೀಡಲಾಗಿದೆ.

Advertisement

ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಫ‌ಲಾನುಭವಿಗಳಾಗಿ ಆಯ್ಕೆಯಾಗಿ ದಾಖಲೆ ಹೊಂದಾಣಿಕೆ ಮತ್ತಿತರ ತಾಂತ್ರಿಕ ಕಾರಣಗಳಿಂದ ಮನೆ ನಿರ್ಮಿಸಿಕೊಳ್ಳಲಾಗದ ಫ‌ಲಾನುಭವಿಗಳಿಗೆ ಮತ್ತೂಮ್ಮೆ ಅರ್ಜಿ ಸಲ್ಲಿಸಲು ಸರಕಾರ ಅವಕಾಶ ಕಲ್ಪಿಸಿಕೊಟ್ಟಿದೆ.

ಲಕ್ಷ ಮನೆ
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ವಸತಿ ಯೋಜನೆ ಮತ್ತು ಸ್ಲಂ ಬೋರ್ಡ್‌ನಿಂದ ತಲಾ ಒಂದು ಲಕ್ಷ ಮನೆ ನಿರ್ಮಾಣ, ಇತರ ನಗರಗಳ ಫ‌ಲಾನುಭವಿಗಳಿಗೆ 65 ಸಾವಿರ ಮನೆಗಳನ್ನು ಸರಕಾರ ಘೋಷಣೆ ಮಾಡಿದೆ.

ಕೇಂದ್ರದಿಂದಲೂ ಮನೆ
ಪ್ರಧಾನಮಂತ್ರಿ ಗ್ರಾಮೀಣ ವಸತಿ ಯೋಜನೆ ಅಡಿ 2021-22ನೇ ಸಾಲಿಗೆ ಈಗಾಗಲೇ 1.41 ಲಕ್ಷ ಮನೆ  ಗಳನ್ನು ಮಂಜೂರು ಮಾಡ ಲಾಗಿದೆ. ಇದೇ ಆರ್ಥಿಕ ವರ್ಷ ದಲ್ಲಿ ಇನ್ನೂ 4 ಲಕ್ಷ ಮನೆ ಮಂಜೂರು ಮಾಡಿ ಸಲು ರಾಜ್ಯ ಸರಕಾರ ಪ್ರಯತ್ನ ನಡೆಸುತ್ತಿದೆ. ರಾಜ್ಯ  ದಲ್ಲಿ ಒಟ್ಟು 25 ಲಕ್ಷ ವಸತಿ ರಹಿತರಿದ್ದು, ಅವರಲ್ಲಿ 18 ಲಕ್ಷ ಜನ ಮನೆ ರಹಿತರು, 7 ಲಕ್ಷ ಮಂದಿ ನಿವೇಶನರಹಿತರಾಗಿದ್ದಾರೆ.

ಇಲಾಖೆಗೆ ಕಾಯಕಲ್ಪ ಕಲ್ಪಿಸಿದ್ದೇವೆ. ಬ್ರೋಕರ್‌ಗಳನ್ನು ಹೊರಹಾಕಿದ್ದೇವೆ. ನಮ್ಮ ಅವಧಿಯಲ್ಲಿ ಕನಿಷ್ಠ 10 ಲಕ್ಷ ಮನೆ ನಿರ್ಮಿಸಿ ಕೊಡುವ ಗುರಿ ಮುಟ್ಟುತ್ತೇವೆ.
– ವಿ. ಸೋಮಣ್ಣ, ವಸತಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next