Advertisement

ಮಾನವ ಗುರಾಣಿ ಸಂತ್ರಸ್ತನಿಗೆ 10 ಲಕ್ಷ ಪರಿಹಾರಕ್ಕೆ ಸೂಚನೆ

11:13 AM Jul 11, 2017 | |

ಹೊಸದಿಲ್ಲಿ: ಕಲ್ಲು ತೂರಾಟಗಾರರಿಗೆ ಪಾಠ ಕಲಿಸಲೆಂದು ಕಾಶ್ಮೀರದ ಯುವಕನನ್ನು ಜೀಪಿಗೆ ಕಟ್ಟಿ ಮಾನವ ಗುರಾಣಿಯಾಗಿ ಬಳಸಿದ ವಿಚಾರ ಭಾರೀ ವಿವಾದ ಸೃಷ್ಟಿಸಿತ್ತು. ಇದೀಗ ಆ ಯುವಕ ಫಾರೂಕ್‌ ಅಹ್ಮದ್‌ ದರ್‌ಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಜಮ್ಮು-ಕಾಶ್ಮೀರ ಸರಕಾರಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ. ಜತೆಗೆ, “ಒಬ್ಬ ಅಪರಾಧಿಯನ್ನೂ ಈ ರೀತಿ ನಡೆಸಿಕೊಳ್ಳಬಾರದು ಎಂದು ನಮ್ಮ ದೇಶದ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳು ಹೇಳು ತ್ತವೆ. ಹೀಗಿರುವಾಗ ಸಾಮಾನ್ಯ ವ್ಯಕ್ತಿಯೊಬ್ಬನನ್ನು ಈ ರೀತಿ ನಡೆಸಿಕೊಳ್ಳುವುದನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ,’ ಎಂದು ಆಯೋಗದ ಅಧ್ಯಕ್ಷ, ನಿವೃತ್ತ ನ್ಯಾ| ಬಿಲಾಲ್‌ ನಜಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next