Advertisement

13 ದಿನಗಳಲ್ಲಿ 10 ಲಕ್ಷ ಪ್ರಕರಣ: 40 ಲಕ್ಷಕ್ಕಿಂತ ಹೆಚ್ಚು ಸೋಂಕಿತರುಳ್ಳ 3ನೇ ದೇಶ ಭಾರತ

01:36 AM Sep 06, 2020 | mahesh |

ನವದೆಹಲಿ: ದೇಶವು 30 ಲಕ್ಷ ಸೋಂಕಿತರನ್ನು ಕಂಡ ಕೇವಲ 13 ದಿನಗಳಲ್ಲೇ ಸೋಂಕಿತರ ಸಂಖ್ಯೆ 40 ಲಕ್ಷ ದಾಟಿದೆ. ಅಂದರೆ 13 ದಿನಗಳ ಅವಧಿಯಲ್ಲಿ 10 ಲಕ್ಷ ಮಂದಿಗೆ ಕೋವಿಡ್ ದೃಢಪಟ್ಟಿದೆ ಎಂಬ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ನೀಡಿದೆ. ಅಷ್ಟೇ ಅಲ್ಲದೆ, ಈಗ ಭಾರತವು 40 ಲಕ್ಷಕ್ಕೂ ಹೆಚ್ಚು ಸೋಂಕಿತರನ್ನು ಕಂಡ 3ನೇ ರಾಷ್ಟ್ರವಾಗಿದೆ. ಮೊದಲೆರಡು ಸ್ಥಾನಗಳಲ್ಲಿ ಅಮೆರಿಕ ಮತ್ತು ಬ್ರೆಜಿಲ್‌ ಇವೆ.

Advertisement

ಇದೇ ವೇಳೆ, ಗುಣಮುಖ ಪ್ರಮಾಣವೂ ಸುಧಾರಿಸಿದ್ದು, ಒಟ್ಟಾರೆ ಈವರೆಗೆ 31.07 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿ, ಅದರ ಪ್ರಮಾಣ ಶೇ.77.23ಕ್ಕೇರಿಕೆಯಾಗಿದೆ ಎಂದೂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಗರಿಷ್ಠ ಪ್ರಕರಣ ದಾಖಲು: ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8ರವರೆಗೆ ದೇಶದಲ್ಲಿ ದಾಖಲೆಯ 86,432 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಅವಧಿಯಲ್ಲಿ 1,089 ಮಂದಿ ಸಾವಿಗೀಡಾಗಿದ್ದಾರೆ. ಶುಕ್ರವಾರ ಒಂದೇ ದಿನ 10.59 ಲಕ್ಷ ಸ್ಯಾಂಪಲ್‌ಗ‌ಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 4.77 ಕೋಟಿಗೂ ಅಧಿಕ ಸ್ಯಾಂಪಲ್‌ಗ‌ಳ ಪರೀಕ್ಷೆ ನಡೆದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next