ಬೀಜಿಂಗ್ : ಕೇಂದ್ರ ಚೀನಾದ ಹೆನಾನ್ ಪ್ರಾಂತ್ಯದ ನೆರೆಯಲ್ಲಿರುವ ಎರಡು ಚಿನ್ನದ ಗಣಿಯಲ್ಲಿ ಸಂಭವಿಸಿರುವ ಎರಡು ಪ್ರತ್ಯೇಕ ಅವಘಡಗಳಲ್ಲಿ ಹತ್ತು ಮಂದಿ ಮೃತಪಟ್ಟಿದ್ದಾರೆ.
ಲಿಂಗಾಬೋ ನಗರದಲ್ಲಿನ ಚೈನಾ ನ್ಯಾಶನಲ್ ಗೋಲ್ಡ್ ಗ್ರೂಪ್‌ಗೆ ಸೇರಿದ ಚಿನ್ನದ ಗಣಿಯೊಂದರಲ್ಲಿ ದಟ್ಟನೆಯ ಹೊಗೆ ಕಂಡು ಬಂದು 12 ಕಾರ್ಮಿಕರು ಹಾಗೂ ಆರು ಮಂದಿ ಆಡಳಿತ ಸಿಬಂದಿ ಸಿಲುಕಿಕೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಕರ್ತರು ನಿನ್ನೆ ರಾತ್ರಿ ಗಣಿಯೊಳಗಿಂದ ಏಳು ಶವಗಳನ್ನು ಹೊರತೆಗೆದಿದ್ದಾರೆ. ಜೀವಂತವಾಗಿ ಮೇಲೆತ್ತಲಾದ ಹತ್ತು ಮಂದಿಯನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಗಿದೆ. ಈ ಪೈಕಿ ಒಬ್ಟಾತ ಚಿಕಿತ್ಸೆಗೆ ಸ್ಪಂದಿಸದೆ ಸತ್ತಿದ್ದು ಇತರ 9 ಮಂದಿ ಚೇತರಿಸಿಕೊಳ್ಳುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಗಣಿಯೊಳಗೆ ಸಿಲುಕಿಕೊಂಡಿರುವ ಕಾರ್ಮಿಕರು ನಿರ್ದಿಷ್ಟವಾಗಿ ಎಲ್ಲಿದ್ದಾರೆ ಎಂದು ಹುಡುಕಿ ತೆಗೆಯಲು ರಕ್ಷಣಾ ಕಾರ್ಯಕರ್ತರು ಅತ್ಯಾಧುನಿಕ ಉಪಕರಣಗಳನ್ನು ಬಳಸುತ್ತಿದ್ದಾರೆ.
ಈ ದುರ್ಘಟನೆ ಸಂಭವಿಸಿದ ಹೊತ್ತಿಗೇ ಸಮೀಪದ ಇನ್ನೊಂದು ಗಣಿಯಲ್ಲಿ ದುರಂತ ಸಂಭವಿಸಿ ಆರು ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದರು. ಈ ಪೈಕಿ ನಾಲ್ವರನ್ನು ಜೀವಂತ ಪಾರುಗೊಳಿಸಲಾಗಿದೆ.ಇಬ್ಬರು ಮೃತಪಟಿಟದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.