Advertisement

ಸ್ಟೀಲ್‌ ರಾಡ್‌ ತುಂಬಿದ್ದ ಟ್ರಕ್ಕಿಗೆ ಸಾರಿಗೆ ಬಸ್ಸು ಢಿಕ್ಕಿ:10 ಸಾವು

12:17 PM Jul 15, 2017 | Team Udayavani |

ಚೆನ್ನೈ : ತಮಿಳುನಾಡಿನ ತಂಜಾವೂರಿನಲ್ಲಿ ಸ್ಟೀಲ್‌ ರಾಡ್‌ ತುಂಬಿದ್ದ ಟ್ರಕ್‌ ಗೆ ಪ್ರಯಾಣಿಕರ ಬಸ್ಸು ಢಿಕ್ಕಿ ಹೊಡೆದ ಪರಿಣಾಮವಾಗಿ ಹತ್ತು ಮಂದಿ ಮೃತಪಟ್ಟು ಇತರ ಕನಿಷ್ಠ 23 ಮಂದಿ ಗಾಯಗೊಂಡಿದ್ದಾರೆ.  ಟ್ರಕ್ಕಿನಲ್ಲಿ ತುಂಬಿದ್ದ ಸ್ಟೀಲ್‌ ರಾಡ್‌ಗಳು ಬಸ್ಸಿನೊಳಗಿದ್ದ  ಕೆಲವು ಪ್ರಯಾಣಿಕರ ದೇಹವನ್ನು ಮಾರಣಾಂತಿಕವಾಗಿ ಚುಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಸರಕಾರ ಬಸ್ಸು ಸುಮಾರು 60 ಪ್ರಯಾಣಿಕರನ್ನು ತಿರುಪುರದಿಂದ ಕುಂಭಕೋಣಕ್ಕೆ ಒಯ್ಯುತ್ತಿತ್ತು. ತಂಜಾವೂರು ಜಿಲ್ಲೆಯ ವಳ್ಳಂ ಎಂಬಲ್ಲಿ ಓವರ್‌ಬ್ರಿಜ್‌ ಮೇಲೆ ಬಸ್ಸು ಸಾಗುತ್ತಿದ್ದಾಗ ತನ್ನ ಎದುರಿನ ಲಾರಿಗೆ ಢಿಕ್ಕಿ ಹೊಡೆಯಿತು. ಎಂಟು ಪ್ರಯಾಣಿಕರು ಹಾಗೂ ಎರಡೂ ವಾಹನಗಳ ಚಾಲಕರು ಸೇರಿ ಒಟ್ಟು ಹತ್ತು ಮಂದಿ ಈ ಭೀಕರ ಅವಘಡದಲ್ಲಿ ಅಸು ನೀಗಿದ್ದಾರೆ. ಗಾಯಾಳುಗಳನ್ನು ತಂಜಾವೂರಿನ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಗೆ ಸೇರಿಸಲಾಗಿದೆ.

ಸ್ಟೀಲ್‌ ರಾಡ್‌ ತುಂಬಿದ್ದ ಟ್ರಕ್ಕನ್ನು ರಾಜ್ಯ ಸಾರಿಗೆ ಬಸ್ಸು ಓವರ್‌ ಟೇಕ್‌ ಮಾಡುವ ಭರದಲ್ಲಿ ಈ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. 

ಮೃತರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ನೀಡಲಾಗುವುದೆಂದು ತಮಿಳು ನಾಡು ಸರಕಾರ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next