ಕೊಲಂಬೋ: ನೆರೆ ರಾಷ್ಟ್ರವಾಗಿರುವ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ದಿನೇದಿನೆ ಹೆಚ್ಚುತ್ತಿದೆ. ವಿದ್ಯುತ್ ಉತ್ಪಾದನೆ ಮಾಡುವುದಕ್ಕೆ ತೈಲ ಕೊರತೆಯುಂಟಾಗಿದ್ದು, ಬುಧವಾರ ದೇಶಾದ್ಯಂತ 10 ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು.
ಮಾರ್ಚ್ ಆರಂಭದಿಂದಲೇ ಶ್ರೀಲಂಕಾದಲ್ಲಿ ವಿದ್ಯುತ್ ಕೊರತೆ ಕಾಣಿಸಿಕೊಂಡಿದ್ದು, ಪ್ರತಿ ದಿನ 7 ತಾಸುಗಳ ಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುತ್ತಿತ್ತು. ಇದೀಗ ಕೊರತೆ ಹೆಚ್ಚಾಗಿದೆ. ತೈಲ ಆಮದು ಮಾಡಿಕೊಳ್ಳುವುದಕ್ಕೂ ಆರ್ಥಿಕ ಬಿಕ್ಕಟ್ಟು ಅಡ್ಡಿಯಾಗುತ್ತಿರುವ ಹಿನ್ನೆಲೆ ಜನರು ಪೆಟ್ರೋಲ್ ಬಂಕ್‌ಗಳ ಎದುರು ಸಾಲು ನಿಲ್ಲಲಾರಂಭಿಸಿದ್ದಾರೆ.
ಬುಧವಾರ ಮತ್ತು ಗುರುವಾರದಂದು ತೈಲ ಲಭ್ಯವಿರುವುದಿಲ್ಲವಾದ್ದರಿಂದ ಜನರು ಸಾಲು ನಿಲ್ಲದಿರಿ ಎಂದು ರಾಜ್ಯದ ಸೆಯ್ಲಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಅವರು ಸೂಚನೆ ನೀಡಿದ್ದರು. ತೈಲ ತುಂಬಿರುವ ಹಡಗು ಬಂದಿದೆಯಾದರೂ, ಅದಕ್ಕೆ ಹಣ ಕೊಡಲು ಸಾಧ್ಯವಾಗುತ್ತಿಲ್ಲ ಎಂದೂ ಮಾಹಿತಿ ಕೊಟ್ಟಿದ್ದರು.
ಇದನ್ನೂ ಓದಿ:ಅಖಿಲೇಶ್ ಯಾದವ್ ಕಾಲೆಳೆದ ಮಾಯಾವತಿ
ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನ ಲಂಕಾದ ಅಂಗಸಂಸ್ಥೆಯಾಗಿರುವ ಎಲ್‌ಒಸಿಯಿಂದ ಸರ್ಕಾರವು ತುರ್ತಾಗಿ 6000 ಮೆಟ್ರಿಕ್ ಟನ್ ತೈಲ ಖರೀದಿ ಮಾಡಲಿದೆ ಎಂದು ಇಂಧನ ಸಚಿವ ಗಾಮಿನಿ ಲೋಕುಗೆ ತಿಳಿಸಿದ್ದಾರೆ.