Advertisement

ನಿಷೇಧಿತ ಆನ್‌ಲೈನ್‌ ಗೇಮ್‌ ಆಡುತ್ತಿದ್ದ 10 ಮಂದಿಯ ಬಂಧನ

10:25 AM Mar 14, 2019 | udayavani editorial |

ಅಹ್ಮದಾಬಾದ್‌ : ಪೊಲೀಸರು ನಿಷೇಧಿಸಿರುವ ಹೊರತಾಗಿಯೂ ಅಪರಿಚಿತ ಆಟಗಾರರ ಸಮರಾಂಗಣ ಎಂದೇ ಕುಖ್ಯಾತಿ ಪಡೆದಿರುವ ಪಿಯುಬಿಜಿ ಆನ್‌ಲೈನ್‌ ಗೇಮನ್ನು ತಮ್ಮ ಮೊಬೈಲ್‌ ಫೋನ್‌ನಲ್ಲಿ ಆಡುತ್ತಿದ್ದ ಆರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 10 ಮಂದಿಯನ್ನು ಗುಜರಾತ್‌ ನ ರಾಜ್‌ಕೋಟ್‌ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. 

Advertisement

ಪೊಲೀಸ್‌ ಕಮಿಶನರ್‌ ಮನೋಜ್‌ ಅಗ್ರವಾಲ್‌ ಅವರು ಕಳೆದ ಮಾರ್ಚ್‌ 6ರಂದು ಪಿಯುಬಿಜಿ ಮತ್ತು ಮೋಮೋ ಚ್ಯಾಲೆಂಜ್‌ ಆನ್‌ಲೈನ್‌ ಗೇಮ್‌ ಗಳನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿದ್ದರು. 

ಆ ಪ್ರಕಾರ ಪೊಲೀಸ್‌ ಠಾಣೆಗಳಿಗೆ ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮತ್ತು ಈ ಗೇಮ್‌ ಗಳನ್ನು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಆಡುತ್ತಿವವರನ್ನು ಬಂಧಿಸುವಂತೆ ಸೂಚಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next