Advertisement

Sri Lankan Navy: 10 ಭಾರತೀಯ ಮೀನುಗಾರರ ಸೆರೆ

12:57 AM Aug 09, 2023 | Team Udayavani |

ಕೊಲಂಬೊ: ಅಕ್ರಮವಾಗಿ ದೇಶದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಶ್ರೀಲಂಕಾ ನೌಕಾ ಪಡೆಯು 10 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದೆ. ಜತೆಗೆ ಅವರ ದೋಣಿಯನ್ನು ವಶಪಡಿಸಿಕೊಂಡಿದೆ.

Advertisement

ಕಳೆದ ಒಂದು ತಿಂಗಳಲ್ಲಿ ಈ ರೀತಿಯ ಘಟನೆಯು ಇದು ಮೂರನೇ ಬಾರಿ. ಶ್ರೀಲಂಕಾದ ಮುಲ್ಲೆ„ತೀವ್‌ನ ಅಲಂಪಿಲ್‌ನ ಜಲಪ್ರದೇಶದಲ್ಲಿ ಆ.7ರಂದು 10 ಮಂದಿ ಭಾರತೀಯ ಮೀನುಗಾರರು ಅಕ್ರಮವಾಗಿ ಮೀನಾಗಾರಿಕೆ ಯಲ್ಲಿ ತೊಡಗಿ ದ್ದರು. ಇವರನ್ನು ಬೆನ್ನಟ್ಟಿ ಬಂಧಿಸಲಾಗಿದೆ. ಜತೆಗೆ ಅವರ ದೋಣಿ ಯನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಮೀನುಗಾರರು ತಮಿಳು ನಾಡಿಗೆ ಸೇರಿದವರಾಗಿದ್ದಾರೆ. ಇವರನ್ನು ಟ್ರಿಂಕೋಮಲಿ ಬಂದ ರಿಗೆ ತರಲಾಗಿದೆ ಎಂದು ಶ್ರೀಲಂಕಾ ನೌಕಾ ಪಡೆಯ ಪ್ರಕಟನೆ ತಿಳಿಸಿದೆ.

ಇದೇ ರೀತಿ ಜು.24ರಂದು 9 ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾ ಪಡೆ ಬಂಧಿ ಸಿತ್ತು. ಇದಕ್ಕೂ ಮುನ್ನ ಜು.8ರಂದು 15 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿ ಅನಂತರ ಬಿಡುಗಡೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next